ಸಾಲು ಮರದ ತಿಮ್ಮಕ್ಕ ಮಾತಿನಲ್ಲಿ ಅಲ್ಲದೆ ಕೃಷಿಯಲ್ಲಿ ಸಾವಿರಾರು ಸಸಿಗಳನ್ನು ರಸ್ತೆ ಬದಿಯಲ್ಲಿ ನೆಟ್ಟು ಅದನ್ನೇ ತನ್ನ ಮಕ್ಕಳು ಎಂದ ಬಾವಿಸಿ ಪೋಷಿಸಿ, ಹಸಿರನ್ನು ಸಂರಕ್ಷಿಸಿದ ಮಹಾ ತಾಯಿ. ಮಾನವ ಕುಲಕ್ಕೆ ಅಪರೂಪದ ಆಸ್ತಿಯನ್ನು ಕೊಟ್ಟ ತಾಯಿ ಇವರು.
ಇಂತಹ ತಾಯಿಯಾದ ಸಾಲು ಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಅವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡುವ ಸಂದರ್ಭದಲ್ಲಿ , ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಾಲುಮರದ ತಿಮ್ಮಕ್ಕ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿಯನ್ನು ನೆರೆದಿದ್ದ ಗಣ್ಯರ ಮುಂದೆ ಪ್ರದಾನ ಮಾಡಿದರು. ಆ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ್ಕ ಅವರು ರಾಷ್ಟ್ರಪತಿ ಅವರ ಹಣೆಯನ್ನು ಮುಟ್ಟಿ ಆಶೀರ್ವಾದ ಮಾಡಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹ ಹಿರಿಯ ಚೇತನ ಹಾಗೂ ಮಹಾ ತಾಯಿಯಾದ ತಿಮ್ಮಕ್ಕ ಅವರ ಆಶೀರ್ವಾದವನ್ನು ಬಹಳ ವಿನಯದಿಂದ ಸ್ವೀಕರಿಸಿದ ಅಪರೂಪದ ಘಟನೆಯೊಂದು ನಡೆಯಿತು. ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಸಾಲು ಮರದ ತಿಮ್ಮಕ್ಕ ಬರುತ್ತಿದ್ದಂತೆ ಆ ಸಮಾರಂಭದಲ್ಲಿ ನೆರೆದಿದ್ದ ಗಣ್ಯರು ಚಪ್ಪಾಳೆ ತಟ್ಟುವ ಮುಖಾಂತರ ಸಾಲುಮರದ ತಿಮ್ಮಕ್ಕರಿಗೆ ಗೌರವ ಸಲ್ಲಿಸಿದ್ದಾರೆ.
ಸಾಲು ಮರದ ತಿಮ್ಮಕ್ಕನಿಗೆ ಸಿಕ್ಕ ಈ ಪ್ರಶಸ್ತಿ ಇಡೀ ಕನ್ನಡ ನಾಡಿಗೆ , ಎಲ್ಲಾ ಪರಿಸರ ಪ್ರೇಮಿಗಳಿಗೆ ಸಿಕ್ಕ ದೊಡ್ಡ ಪ್ರಶಸ್ತಿಯಾಗಿದೆ.