ಪ್ರಸಾದದಲ್ಲಿ ವಿಷ ಬೆರೆಸಲು ಅಂಬಿಕಾ ಕೀಟನಾಶಕವನ್ನ ತರಿಸಿಕೊಂಡಿದ್ದು ಹೇಗೆ ಗೊತ್ತಾ..?
ಇಂದು ಮಾರಮ್ಮ ದೇವಿ ಪ್ರಸಾದದಲ್ಲಿ ವಿಷ ಇಟ್ಟ ಅಷ್ಟು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಪೊಲೀಸರು.. ಇನ್ನು ಇಡೀ ಕರುನಾಡನ್ನೆ ಬೆಚ್ಚಿಬೀಳಿಸಿದ್ದ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಅಂಬಿಕಾ ಪ್ರಸಾದದಲ್ಲಿ ವಿಷವನ್ನ ಮಿಶ್ರಣ ಮಾಡಲು ಕೀಟನಾಶಕವನ್ನ ತರಿಸಿಕೊಂಡಿದ್ರು.. ಇದಕ್ಕಾಗಿ ಈ ಮಹಿಳೆ ಮನೆಯಲ್ಲಿ ಗಿಡಗಳನ್ನ ಬೆಳೆಸಿರುವುದಾಗಿ ಹೇಳಿ, ತನಗೆ ಗೊತ್ತಿರುವ ಕೃಷಿ ಅಧಿಕಾರಿಯೊಬ್ಬರಿಂದ ಕೀಟನಾಶಕ ತರಿಸಿಕೊಂಡಿದ್ದು, ಅದನ್ನು ತನ್ನ ಪತಿ ಮಾದೇಶನಿಗೆ ನೀಡಿದ್ದಾರೆ.. ಮಾದೇಶ ಕೀಟನಾಶಕವನ್ನು ದೊಡಯ್ಯಗೆ ನೀಡಿ ಪ್ರಸಾದಕ್ಕೆ ಬೆರೆಸಿದ್ದಾಗಿ ಸತ್ಯವನ್ನ ಬಾಯ್ಬಿಟ್ಟಿದ್ದಾರೆ..
ಮಾರಮ್ಮ ದೇವಾಲಯ ಟ್ರಸ್ಟ್ ನ ಅಧ್ಯಕ್ಷರಾಗಿರುವ ಮಹಾದೇವಸ್ವಾಮಿ, ಮಾರಮ್ಮ ದೇವಾಲಯವನ್ನ ಪೂರ್ಣವಾಗಿ ತಮ್ಮ ವಶಮಾಡಿಕೊಳ್ಳಬೇಕು ಎಂಬ ಆಸೆಯಿಂದ ಹೀಗೆ ಮಾಡಿದ್ದಾರೆ..