ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಸದ್ಯ ಸ್ಯಾಂಡಲ್ವುಡ್ ಮಾತ್ರವಲ್ಲದೆ ತೆಲುಗು ಚಿತ್ರಪ್ರಿಯರ ನೆಚ್ಚಿನ ನಟಿಯೂ ಕೂಡ. ಈಗಾಗಲೆ ಟಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಶ್ಮಿಕಾ, ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶಗಿಟ್ಟಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನ ಸೂಪರ್ ಸ್ಟಾರ್ಸ್ ಸಿನಿಮಾಗಳಲ್ಲಿ ರಶ್ಮಿಕಾ ಹೆಸರು ಕೇಳಿ ಬರುತ್ತಿದೆ.
ಹೌದು, ಟಾಲಿವುಡ್ ನಲ್ಲಿ ಯಾವುದೆ ಸ್ಟಾರ್ ನಟರ ಹೊಸ ಸಿನಿಮಾ ಸೆಟ್ಟೇರಿದ್ರು ನಾಯಕಿಯರ ಲಿಸ್ಟ್ ನಲ್ಲಿ ಕಿರಿಕ್ ಬೆಡಗಿಯ ಹೆಸರು ಕೂಡ ಇರುತ್ತೆ. ಸದ್ಯ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ನಾಯಕಿಯಾಗಿ ರಶ್ಮಿಕಾ ಕಾಣಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ. ಈ ಹಿಂದೆಯೆ ಮಹೇಶ್ ಬಾಬು ಜೊತೆ ರಶ್ಮಿಕಾ ಅಭಿನಯಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದ್ರೀಗ ಈ ಮಾತು ನಿಜ ಎನ್ನುತ್ತಿವೆ ಟಾಲಿವುಡ್ ಅಂಗಳ. ಹೌದು, ಮಹೇಶ್ ಬಾಬು ಅಭಿನಯದ 26ನೇ ಸಿನಿಮಾಗೆ ರಶ್ಮಿಕಾ ನಾಯಕಿಯಂತೆ. ಅನಿಲ್ ರವಿಪುಡಿ ನಿರ್ದೇಶನದ ಮಹೇಶ್ ಸಿನಿಮಾದಲ್ಲಿ ಕನ್ನಡದ ಚೆಲುವೆ ಮಿಂಚಲಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ. ಇನ್ನು ಅದೇ ಸಿನಿಮಾಗೆ ಸೌತ್ ಸಿನಿ ಇಂಡಸ್ಟ್ರಿಯ ಮತ್ತೋರ್ವ ಖ್ಯಾತ ನಟಿ ಸಾಯಿ ಪಲ್ಲವಿ ಹೆಸರು ಕೂಡ ಕೇಳಿ ಬರುತ್ತಿದೆ. ಇಬ್ಬರಲ್ಲಿ ಯಾರು ಆಯ್ಕೆಯಾಗುತ್ತಾರೆ ಎನ್ನುವುದು ಸಧ್ಯದ ಕುತೂಹಲ. ಮಹೇಶ್ ಬಾಬು ಸದ್ಯ ‘ಮಹರ್ಷಿ’ ಸಿನಿಮಾದ ಸಕ್ಸಸ್ ನ ಸಂತಸದಲ್ಲಿದ್ದಾರೆ. ಇದೇ ಸಮಯದಲ್ಲಿ ಮಹೇಶ್ 26ನೇ ಸಿನಿಮಾದ ಕೂಡ ಭಾರಿ ಚರ್ಚೆಯಾಗುತ್ತಿದ್ದು ರಶ್ಮಿಕಾ ಬಳಿ ಸದ್ಯ ಕೈತುಂಬಾ ಸಿನಿಮಾಗಳಿವೆ. ಡೇಟ್ ಸಮಸ್ಯೆಯಾಗುವ ಸಾಧ್ಯತೆ ಕೂಡ ಇದೆಯಂತೆ. ಹಾಗಾಗಿ ಎಲ್ಲವನ್ನು ಸರಿದೂಗಿಸಿಕೊಂಡು ಪ್ರಿನ್ಸ್ ಜೊತೆ ರೋಮ್ಯಾನ್ಸ್ ಮಾಡ್ತಾರಾ ರಶ್ಮಿಕಾ ಎಂದು ಕಾದುನೋಡಬೇಕಾಗಿದೆ