ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಪ್ರೆಸ್‌ಕ್ಲಬ್‌ನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನ ಅರ್ಥಪೂರ್ಣವಾಗಿ ಆಚರಿಸಿದರು. ಈ ಬಾರಿ ಸದಸ್ಯರ ಕುಟುಂಬದವರಿಗಾಗಿ ವಿವಿಧ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಸಮಾರಂಭವನ್ನು ವಂದೇಕರ್ನಾಟಕ ಮಾಸಿಕ ಪತ್ರಿಕೆ ಹಾಗೂ ನಳಪಾಕ ಹೋಟೆಲ್ ವ್ಯವಸ್ಥಾಪಕ ನಿರ್ದೇಶಕ ಲಿಂಗಯ್ಯ ಕಾಡದೇವರಮಠ ಉದ್ಘಾಟಿದರು. ಪ್ರೆಸ್ ಕ್ಲಬ್ ಸದಸ್ಯರ, ಮಾಧ್ಯಮ ಮಿತ್ರರ ಮಕ್ಕಳಿಂದ ಶ್ರೀ ರಾಧೆಕೃಷ್ಣ ರ್ಯಾಂಪ್ ವಾಕ್, ಗಾಯನ ಮತ್ತು ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ ಸೆಳೆದವು.
ಈ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ಭಾಗವಸಿದ್ದರು. ಮುದ್ದು ಮುದ್ದು ರಾಧೇ ಕೃಷ್ಣರನ್ನ ನೋಡಲು ಎರಡು ಕಣ್ಣು ಸಾಲದೆನ್ನುವ ಭಾವ ಮೂಡಿತ್ತು.
ಇನ್ನೂ ಮುಖ್ಯ ಅತಿಥಿಗಳಾಗಿ ನಳಪಾಕ ಹೋಟೆಲ್ ಮಾಲೀಕರಾದ ಕವಿತಾ ಲಿಂಗಯ್ಯ ಕಾಡದೇವರಮಠ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾದ ರೋಶನಿ ಗೌಡ, ಗೋಕುಲ್ ಗ್ರೂಪ್ ಮಾಲೀಕರಾದ ಎಂ. ಮಂಜುನಾಥ್, ಬೆಂಗಳೂರು ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಸಾಂಸ್ಕೃತಿಕ ಸಮಿತಿ ಸಹ ಸಂಚಾಲಕಿ ರೋಹಿಣಿ ವಿ. ಅಡಿಗ ಹಾಗೂ ಕ್ಲಬ್ ನ ಸಮಿತಿ ಸದಸ್ಯರು ಭಾಗವಹಿಸಿದ್ದರು. ಮಕ್ಕಳಿಗೆ ಉಡುಗೊರೆ ಕೊಟ್ಟು ಸಂಭ್ರಮಿಸಲಾಯ್ತು.