ಪ್ರೇಮಿಗಳು ಸ್ನೇಹಿತರಿಗೆ ಅದೆಂಥಾ ನೋವು ಕೊಟ್ರು….?!

Date:

ಕಷ್ಟದಲ್ಲಿ ಕುಟುಂಬದವರು, ಬಂಧುಗಳು ಜೊತೆಯಲ್ಲಿ ಇರ್ತಾರೋ ಇರಲ್ವೋ…?‌ ಆದ್ರೆ, ಸ್ನೇಹಿತರು ಮಾತ್ರ ಜೊತೆಯಲ್ಲಿ ಇದ್ದೇ ಇರ್ತಾರೆ…! ಅದಕ್ಕೇ ಅಲ್ವೇ ಸ್ನೇಹವನ್ನು ರಕ್ತ ಸಂಬಂಧಗಳ ಮೀರಿದ ಅನುಬಂಧ ಅನ್ನೋದು…!


ಕೈಯಲ್ಲಿ ದುಡ್ಡಿಲ್ಲ ಅಂದ್ರೆ ಸಾಲ ಮಾಡಿಯಾದ್ರು ಹಣ ಕೊಟ್ಟು ಕಷ್ಟಕ್ಕೆ ಆಗ್ತಾನೆ ಗೆಳೆಯ. ಊಟಕ್ಕೆ ದುಡ್ಡಿಲ್ಲದೇ ಇರುವಾಗ ಬಾ ಮಗ ನಾನಿದ್ದೀನಿ ಅಂತ ಊಟ ಕೊಡಿಸ್ತಾನೆ ಸ್ನೇಹಿತ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡೆ ಎಂದು ಕೂತಾಗ ಕೈ ಕೊಟ್ಟು ಎದ್ದೇಳಿಸಿ, ಅಭಯವ ನೀಡಿ ಹೊಸದಾರೀಲಿ ಕರ್ಕೊಂಡು ಹೋಗೋದು ಸಹ ಒನ್ಸ್ ಅಗೈನ್ ಅದೇ ಫ್ರೆಂಡ್ ….!


ಇಷ್ಟೇ ಅಲ್ಲ…ಗೆಳೆಯ/ಗೆಳತಿ ಯಾರನ್ನಾದ್ರು ಪ್ರೀತಿಸ್ತಿದ್ರೆ ಅವರನ್ನು ಒಂದು ಮಾಡೋದು ಸಹ ಇದೇ ಸ್ನೇಹಿತರು. ಎರಡೂ ಕುಟುಂಬಗಳ ವಿರೋಧ ಕಟ್ಕೊಂಡು, ತಮಗೆ ಏನಾದ್ರೂ ಪರವಾಗಿಲ್ಲ, ನಮ್ಮ ಗೆಳೆಯ/ಗೆಳತಿ ಚನ್ನಾಗಿರ್ಬೇಕು ಅಂತ ಎಂಥಾ ರಿಸ್ಕ್ ಬೇಕಾದ್ರು ತಗೋಳ್ತಾರಲ್ಲ ಆ ಸ್ನೇಹಿತರೇ ದೇವರು ಕೊಟ್ಟ ವರ.


ಅವನು ಕಾರ್ತಿಕ್, ಅವಳು ದೀಪ….ಮೈಸೂರಿನ ಪ್ರತಿಷ್ಠಿತ ಕಾಲೇಜಿನ ಮಾಜಿ ವಿದ್ಯಾರ್ಥಿಗಳು.‌ ಆಗಿನ್ನೂ ಬಿಕಾಂಗೆ ಜಾಯಿನ್ ಆಗಿದ್ರಷ್ಟೇ…ಗೊತ್ತೋ ಗೊತ್ತಿಲ್ಲದೇ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸ ತೊಡಗಿದ್ರು.


ಮಗ ಇದು ಲವ್ವಲ್ಲ‌ ಅಟ್ರಾಕ್ಷನ್ ಅಷ್ಟೇ…ಅಂತ ಕಾರ್ತಿಕ್ ಗೆ ಅವ್ನ ಫ್ರೆಂಡ್ಸ್ ಹೇಳಿದ್ರೂ ಅವ್ನು ಅರ್ಥ ಮಾಡಿಕೊಳ್ಲಿಲ್ಲ. ಅತ್ತ ದೀಪಗೆ, ‘ನೋಡೇ ಈ ಲವ್ ಗಿವ್ ಎಲ್ಲಾ ಬಿಟ್ಟಾಕು. ಓದೋ ಕಡೆ ಗಮನ ಕೊಡು. ಅವ್ನು ಓದು ಮುಗಿಸಿ ಕೆಲಸಕ್ಕೆ ಸೇರಿ ಲೈಫಲ್ಲಿ ಸೆಟಲ್ ಆಗುವಷ್ಟರಲ್ಲಿ ‌ನಿಮ್ ಮನೇಲಿ ಹುಡುಗನ್ನ ನೋಡಿರ್ತಾರೆ…! ಅವನು ಸ್ಟಾಂಡ್ ಆಗೋ‌ ತನಕ ‌ನೀನು ಮದ್ವೆ ಆಗದೇ ಇರೋಕೆ ಆಗಲ್ಲ.‌ ಪ್ರಾಕ್ಟಿಕಲ್ ಆಗಿ ಯೋಚಿಸೇ ಅಂತ ಫ್ರೆಂಡ್ಸ್ ಬುದ್ಧಿವಾದ ಹೇಳಿದ್ರು…!


ಹೀಗೆ ಕಾರ್ತಿಕ್ ಹಾಗೂ ದೀಪಗೆ ಅವರವರ ಫ್ರೆಂಡ್ಸ್ ಬುದ್ಧಿಮಾತು ಹೇಳಿದ್ದೇ ಬಂತು, ಪ್ರೀತಿ ಗುಂಗಿನಲ್ಲಿ ತೇಲ್ತಿದ್ದ ಅವರಿಬ್ಬರಿಗೆ ಅವರೇ ಪ್ರಪಂಚ…!‌ಫ್ರೆಂಡ್ಸ್ ಹೇಳಿದ ನಾಲ್ಕೊಳ್ಳೆ ಮಾತುಗಳೇ ಕೆಟ್ಟದಂತೆ ಕಂಡವು…! ಪ್ರೀತಿಯೇ ದೊಡ್ಡದೆಂದು ಸ್ನೇಹಕ್ಕೆ ತಿಲಾಂಜಲಿ ಬಿಟ್ಟರು…! ಸ್ನೇಹಿತರ ಜೊತೆ ಕಾಲ ಕಳೆಯೋದು ಇಬ್ಬರಿಗೂ ಮರೆತೋಯ್ತು…! ಓದೋ‌ ಗಮನ ಮರೆಯಾಯ್ತು…!
ಹಂಗೋ ಹಿಂಗೋ‌ ಜಸ್ಟ್ ಪಾಸ್ ಆಗಿ ಪದವಿ ಸರ್ಟಿಫಿಕೇಟೇನೋ ಪಡೆದ್ರು.‌ ಮೈಸೂರು, ಬೆಂಗಳೂರು , ಚೆನ್ನೈ,‌ಹೈದರಾಬಾದ್‌ ಹೀಗೆ ಒಂದಿಷ್ಟು ಕಡೆ ಕೆಲಸ ಹುಡುಕಿದ್ರೂ ಸಿಗಲಿಲ್ಲ…!


ಜೊತೆಯಲ್ಲಿ ಓದಿದ್ದ ಸ್ನೇಹಿತರೆಲ್ಲ ದೊಡ್ಡದೋ, ಚಿಕ್ಕದೋ‌ ಕೆಲಸ ಹುಡ್ಕೊಂಡು ದುಡಿಮೆ ಹಾದಿ‌ ಕಂಡು‌ಕೊಂಡಿದ್ರು…!
ಕಾರ್ತಿಕ್ ಮತ್ತು ದೀಪ ಕೆಲಸಕ್ಕಾಗಿ ಪರದಾಡ್ತಿರೋದನ್ನು ನೋಡಿದ ಸ್ನೇಹಿತರು ಅವರಿವರನ್ನು ಬೇಡಿಕೊಂಡು ಕೆಲಸ‌ ಕೊಡಿಸಿದ್ರು…! ನಿಧಾನಕ್ಕೆ ಇಬ್ಬರಿಗೂ ಸ್ನೇಹದ ಅರಿವಾಗುತ್ತಾ ಹೋಯ್ತು.‌ಕಾಲೇಜು ದಿನಗಳಲ್ಲಿ ಇಬ್ಬರೂ ಎಂಥಾ ಸ್ನೇಹಿತರನ್ನು ಮಿಸ್ ಮಾಡಿಕೊಂಡ್ವಿ ಅಂತ ಬೇಜಾರಾದ್ರು.


ದಿನಗಳು ಕಳೆದಂತೆ ದೀಪಗೆ ಮನೆಯಲ್ಲಿ ಗಂಡು ನೋಡಲಾರಂಭಿಸಿದ್ದರು.  ‘ನೋಡು ನಮ್ಮನೇಲಿ ಹುಡುಗನನ್ನು ಹುಡುಕ್ತಿದ್ದಾರೆ. ಬೇಗ ನಾವು ಮನೇಲಿ‌ ಮಾತಾಡಿ ಒಪ್ಪಿಸಿ ಮದ್ವೆ ಆಗ್ಬೇಕು’ ಎಂದು ದೀಪ ಕಾರ್ತಿಕ್ ಗೆ ಹೇಳಿದ್ಲು…!
‘ನಾನಿನ್ನೂ ಲೈಫಲ್ಲಿ ನನ್ನ ಕಾಲ್ಮೇಲೆ ಗಟ್ಟಿಯಾಗಿ ನಿಲ್ಲಿಲ್ಲ. ಇಷ್ಟು ಬೇಗ ಮದ್ವೆಯಾಗೋಕೆ ಆಗಲ್ಲ. ಸ್ವಲ್ಪ ಕಾಯಿ.‌ ಅಷ್ಟೊಂದು ಅವಸರವೇಕೆ’ ಎಂದ ಕಾರ್ತಿಕ್…!


‘ನಿಂಗೆ ಅರ್ಥವಾಗಲ್ಲ…. ನಾನೊಬ್ಳು ಹುಡ್ಗಿ.‌ ಇದು ಮದ್ವೆಯಾಗಲು ರೈಟ್ ಟೈಮ್…! ಪ್ರತಿಯೊಬ್ಬ ಹೆಣ್ ಹೆತ್ತವರು ಮಾಡೋ ಕೆಲಸವನ್ನೇ ನಮ್ ಮನೇಲೂ ಮಾಡ್ತಿದ್ದಾರೆ. ಅರ್ಥ ಮಾಡ್ಕೋ‌ ಕಾರ್ತೀ…ಪ್ಲೀಸ್ ಕಣೋ ಚಿನ್ನ…’ಅಂತ ಅಂಗಲಾಚಿದ್ಲು…!
ಊಹ್ಞೂಂ, ಊಹ್ಞೂಂ ಕಾರ್ತಿಕ್ ಒಪ್ಪಲಿಲ್ಲ…! ನಿಂಗೆ ಅರ್ಜೆಂಟ್ ಇದ್ರೆ‌ ಮನೇಲಿ ನೋಡಿದವರನ್ನ ಕಟ್ಕೊ…? ಎಂದು ರೇಗಾಡಿದ…!
ಇಬ್ಬರ ಈ ಜಗಳದ ನಡುವೆ ಕೆಲಸ ಕೊಡಿಸಿದ ಡಿಗ್ರಿ ಸ್ನೇಹಿತರೇ ಜಡ್ಜ್ ಆಗಿ ಬರಬೇಕಾಯಿತು…! ಇಬ್ಬರೂ ಅವರ ಸ್ನೇಹಿತರನ್ನು ಮಧ್ಯೆ ಎಳೆದು‌ ತಂದ್ರು…!


ಕಾರ್ತಿಕ್, ಹೇಗಿದ್ರು‌ ಕೆಲಸ ಸಿಕ್ಕಿದೆ. ಮುಂದೆ ಒಳ್ಳೇದಾಗುತ್ತೆ. ಲೈಫಲ್ಲಿ 100% ಸೆಟಲ್ ಆಗಿ ಮದ್ವೆ ಆಗೋದು ಅಂದ್ರೆ‌ ಈ ಜನ್ಮದಲ್ಲಿ ಸಾಧ್ಯವಿಲ್ಲ….! ಈಗ ಹೇಗಿದ್ರು ದುಡೀತಾ ಇದ್ದೀಯ…ನಿನ್ ಕಾಲ್ಮೇಲೆ ನೀನು ನಿಂತ್ಕೊಂಡಂಗೇ ತಾನೆ…?‌ಯೋಚಿಸು ನಾಲ್ಕೈದು ವರ್ಷದ ಪ್ರೀತಿಯನ್ನು ಇಷ್ಟು ಸುಲಭದಲ್ಲಿ ಕಳೆದುಕೊಳ್ಳಬೇಡ.‌ ಈ ಪ್ರೀತಿಯನ್ನು‌ ಕಡಿದುಕೊಂಡು ನೀನೂ ಕೊರಗಿ, ನಿನ್ನವಳನ್ನೂ ಕೊರಗುವಂತೆ ಮಾಡ್ಬೇಡ ಅಂದ್ರು ಫ್ರೆಂಡ್ಸ್…!


‘ಅವತ್ತು ನೀವು ಹೇಳಿದ್ದೇ ಸರಿ , ನನಗೆ ಲವ್ ಗಿವ್ ಬೇಡವಾಗಿತ್ತು’ ಅಂಥ ಕಾರ್ತಿಕ್ ಮತ್ತು ದೀಪ ಅವರವರ ಫ್ರೆಂಡ್ಸ್ ಬಳಿ ಹೇಳಿಕೊಂಡ್ರು…!
ಅದು ಆಗ ಮಾಡ್ಬೇಕಾಗಿದ್ದ ಯೋಚನೆ…! ಪ್ರೀತಿ ಮೊಳಕೆಯೊಡೆದು‌‌ ಸಸಿಯಾಗಿ, ಈಗ ಬೃಹತ್ ಮರವಾಗಿ ಬೆಳೆದಿರುವಾಗ ಕಡಿಯುವುದಲ್ಲ…! ಮೊಳಕೆಯೊಡೆಯಲೇ ಬಿಡಬಾರದಿತ್ತು…! ಇಲ್ಲವೇ ಕನಿಷ್ಠ ಮೊಳಕೆಯಲ್ಲೇ ಚಿವುಟಿ ಹಾಕಬೇಕಿತ್ತು…! ಈಗ ಪ್ರೀತಿಯನ್ನು ಉಳಿಸಿಕೊಂಡು‌ ಮದುವೆಯಾಗಿ ಜೊತೆಯಲ್ಲಿ ಹೆಜ್ಜೆ ಹಾಕೋದನ್ನು ನೋಡಿ ಎಂದು ಫ್ರೆಂಡ್ಸ್ ಕಿವಿಮಾತು ಹೇಳಿದ್ರು…!
ಕೊನೆಗೆ ಕಾರ್ತಿಕ್ ಮತ್ತು ದೀಪ ಇಬ್ಬರೂ ಮನೆಯಲ್ಲಿ ಪ್ರೀತಿ ವಿಷಯವನ್ನು ಹಂಚಿಕೊಂಡ್ರು. ಎರಡೂ ಕುಟುಂಬದಿಂದ ವಿರೋಧ ವ್ಯಕ್ತವಾಯಿತು…!


ಮುಂದೇ…?‌ ಗೊತ್ತೇ ಇದೆ ಅಲ್ವಾ…?‌ ಸ್ನೇಹಿತರು ಇಬ್ಬರಿಗೂ ಮದುವೆ‌ ಮಾಡಿಸಿದ್ರು…! ಕಳೆದ ವರ್ಷ ಇದೇ ದಿನ ಅಂದ್ರೆ ಪ್ರೇಮಿಗಳ ದಿನದಂದು ಕಾರ್ತಿಕ್ ಮತ್ತು ದೀಪರ ಮದುವೆ ಆಗಿತ್ತು…


ಎಲ್ಲರೂ ಸೇರಿ ಅಡ್ವಾನ್ಸ್ ಗೆ ದುಡ್ಡು ಅಡ್ಜೆಸ್ಟ್ ಮಾಡಿಕೊಟ್ಟು ಮನೆಯನ್ನೂ ಮಾಡಿಕೊಟ್ರು…! ಎರಡು‌ ಕುಟುಂಬದ ವಿರೋಧವನ್ನು ಈ ಸ್ನೇಹಿತರೂ ಎದುರಿಸಬೇಕಾಯಿತು…! ಹುಡುಗರು-ಹುಡುಗಿಯರೆನ್ನದೆ ಕಾರ್ತಿಕ್ ‌, ದೀಪ ಕುಟುಂಬದವರು‌ ಇಬ್ಬರ ಫ್ರೆಂಡ್ಸ್ ಗೆ ಪೊಲೀಸ್ ಠಾಣೆ ಮೆಟ್ಟಿಲೂ ಹತ್ತಿಸಿದ್ರು…! ಎಲ್ಲವನ್ನೂ ಧೈರ್ಯದಿಂದ ಎದುರಿಸಿ‌ ಗೆಳೆಯ -ಗೆಳತಿಯರು ನವಜೋಡಿಗೆ ರಕ್ಷಕಾಗಿ ನಿಂತ್ರು…!


ಮದ್ವೆಯಾಗಿ ವರ್ಷ ಕಳೆದಿಲ್ಲ…ಈಗಲೇ ಇಬ್ಬರೂ ದೂರಾಗಿದ್ದಾರೆ…! ಕಾರಣ ಗೊತ್ತಿಲ್ಲ, ವಿಚ್ಚೇದನವೂ ಆಗಿ ದೀಪಗೆ ಮತ್ತೊಂದು ಮದುವೆಯೂ ಆಗಿದೆ..! ಇಬ್ಬರೂ ಅವರವರ ದಾರಿಯಲ್ಲಿದ್ದಾರೆ…! ಕೆಲಸ‌ ಕೊಡಿಸಿ,‌ ಮದುವೆಯೂ ಮಾಡಿಸಿದ ಸ್ನೇಹಿತರ ಮಾತಿಗೂ ಬೆಲೆ ಇಲ್ಲ…! ಬೆಲೆ ಕೊಡೋದು‌ ಬಿಡಿ, ಮಾತೂ ಆಡಿಸುತ್ತಿಲ್ಲ….!
ಸ್ನೇಹಿತರ ತ್ಯಾಗಕ್ಕೆ ಬೆಲೆಯೇ ಇಲ್ಲವೇ…! ಅದೆಂಥಾ ನೋವು ಕೊಟ್ರು ಈ ಪ್ರೇಮಿಗಳು…!?

(ಮೈಸೂರಿನಲ್ಲಿ ನಡೆದ ನೈಜ ಘಟನೆ)

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....