No menu items!
12.3 C
Munich
Thursday, April 30, 2026

ಇಡೀ ಊರವರೇ ಸೇರಿ ಮಾಡಿದ ಆ ಒಂದು ಕೆಲಸ ಕೇಳಳಿದ್ರೆ….ನಿಬ್ಬೆರಗಾಗ್ತೀರಿ..!

Must read

ಕುಟ್ಟೆಂಪೆರೂರ್ ನದಿ, ಕೇರಳದ ಎರಡು ಪ್ರಮುಖ ನದಿಗಳಾದ ಪಂಬಾ ಮತ್ತು ಅಚಂಕೋವಿಲ್ ನದಿಯ ಉಪನದಿ. ಕಳೆದ 10 ವರ್ಷಗಳಲ್ಲಿ ಕುಟ್ಟೆಂಪೂರ್ ನದಿ ಸಾಕಷ್ಟು ಮಲೀನಗೊಂಡಿದೆ.
ಆದ್ರೆ ಸ್ಥಳೀಯರಿಗೆ ನದಿಯ ಮಹತ್ವ ಅರಿವಾಗಿದ್ದೇ ತಡ, ತ್ಯಾಜ್ಯವನ್ನೆಲ್ಲಾ ಒಂದೆಡೆ ಸರಿಸಿ, ಕಟ್ಟೆಂಪೆರೂರ್ ನದಿಯನ್ನು ಶುಚಿಗೊಳಸಿದ್ದಾರೆ. ಅಲೆಪ್ಪಿ ಜಿಲ್ಲೆಯ ಬುಧ್ನೋರ್ ಪಂಚಾಯತ್ ವ್ಯಾಪ್ತಿಯ ಸುಮಾರು 700 ಜನರು ನದಿ ಶುಚಿಗೊಳಿಸಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಪುರುಷರು, ಮಹಿಳೆಯರು ಎನ್ನದೆ ಇವರೆಲ್ಲಾ ಸುಮಾರು 70 ದಿನ ಜೊತೆ ಸೇರಿ ಕೆಲಸಮಾಡಿದ್ದರು. ಪರಿಣಾಮ ಕಟ್ಟೆಂಪೆರೂರ್ ನದಿ ಶುಭ್ರವಾಗಿ ಕಂಗೊಳಿಸುತ್ತಿದೆ.
ಕಟ್ಟೆಂಪೆರೂರ್ ನದಿಯ ಉದ್ದಕ್ಕೂ ಹಲವು ಕಾರ್ಖಾನೆಗಳಿವೆ. ಅಲ್ಲಿಂದ ಬಂದ ತ್ಯಾಜ್ಯ, ವಿಷಯುಕ್ತ ನೀರು ಕಟ್ಟೆಂಪೆರೂರ್ ನದಿಯನ್ನು ಸಂಪೂರ್ಣವಾಗಿ ಹಾಳು ಮಾಡಿತ್ತು. ಅಷ್ಟೇ ಅಲ್ಲ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳು ನದಿ ತುಂಬಾ ತುಂಬಾ ತುಂಬಿ ಹೋಗಿದ್ದವು. ಹೀಗಾಗಿ ಕಟ್ಟೆಂಪೆರೂರ್ ನದಿ ಯಾವ ಉಪಯೋಗಕ್ಕೂ ಲಾಯಕ್ಕಿಲ್ಲದಂತೆ ಆಗಿ ಹೋಗಿತ್ತು.


ಅಂದಹಾಗೇ, ಬುಧ್ನೋರ್ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಕೊರತೆ ಉಂಟಾಗಿತ್ತು. ಈ ವೇಳೆಯಲ್ಲಿ ನದಿ ನೀರನ್ನು ಬಿಟ್ಟು ಬೇರೆ ನೀರಿನ ಸೋರ್ಸ್ ಕೂಡ ಇರಲಿಲ್ಲ. ತ್ಯಾಜ್ಯಗಳಿಂದ ತುಂಬಿ ಹೋಗಿದ್ದ ನದಿಯನ್ನು ಶುಚಿಗೊಳಿಸುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಸರಕಾರಕ್ಕೆ ನದಿಯನ್ನು ಸ್ವಚ್ಛಗೊಳಿಸುವ ಬಗ್ಗೆ ಮತ್ತು ಪರಿಸರಕ್ಕೆ ಅದರಿಂದಾಗುವ ಲಾಭದ ಬಗ್ಗೆ ವರದಿ ನೀಡಿದ್ರು.
ನೋಡ್ರಿ, ಆಮೇಲೆ, ಸುತ್ತಮುತ್ತಲಿನ ಜನರಿಗೆ ನದಿ ನೀರಿನ ಮಹತ್ವವನ್ನು ತಿಳಿಹೇಳಿದ್ರು. ಅಷ್ಟೇ ಅಲ್ಲ ನದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರನ್ನು ಕೂಡ ಸೇರಿಸಿಕೊಂಡ್ರು. ಊರಿನ ಜನರೇ ಸ್ವಚ್ಛತಾ ಕಾರ್ಯಕ್ಕೆ ಕೈ ಹಾಕಿದ ಮೇಲೆ ಎಲ್ಲಾ ಕೆಲಸಗಳು ಸುಲಭವಾಯಿತು. ಕಟ್ಟೆಂಪೆರೂರ್ ನದಿ ತನ್ನ ನೈಜತೆಯನ್ನು ಮರಳಿ ಪಡೆಯಿತು.


ನದಿ ಸಚ್ಚತೆಯ ಸಮಯದಲ್ಲಿ ಸಾಕಷ್ಟು ಮುನ್ನಚ್ಚರಿಕೆಗಳನ್ನು ಕೂಡ ತೆಗೆದುಕೊಳ್ಳಲಾಗಿತ್ತು. ನದಿಯ ಕೆಳಭಾಗದಲ್ಲಿ ಸೇರಿಕೊಂಡಿದ್ದ ತ್ಯಾಜ್ಯಗಳನ್ನು ಮೊದಲು ತೆಗೆಯಲಾಯಿತು. ಪ್ಲಾಸ್ಟಿಕ್ಗಳನ್ನು ಹೆಕ್ಕಿ ತೆಗೆಯಲಾಯಿತು.
ನದಿ ಪಾತ್ರದಲ್ಲಿ ಸೇರಿದ್ದ ತ್ಯಾಜ್ಯಗಳನ್ನು ಕೂಡ ತೆಗೆದ, ಪಟ್ಟೆಂಪೆರೂರ್ ನದಿಯನ್ನು ಸ್ವಚ್ಛಗೊಳಿಸಲಾಯಿತು. ಸರಕಾರ ಮತ್ತು ಪಂಚಾಯತ್ ಜಂಟಿಯಾಗಿ ಮಾಡಿದ ಈ ಕೆಲಸ ಸಾಕಷ್ಟು ಯಶಸ್ಸು ತಂದುಕೊಟ್ಟಿದೆ. ನದಿ ಮಾತ್ರ ಶುದ್ಧವಾಗಿದ್ದು ಅಲ್ಲದೆ, ಅಲ್ಲಿನ ನೀರು ಕೂಡ ಈಗ ಬಳಕೆಗೆ ಲಭ್ಯವಿದೆ.
ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ ಅನ್ನುವುದನ್ನು ಕೇರಳದ ಬೂಧನೂರ್ ಗ್ರಾಮಸ್ಥರು ಮಾಡಿ ತೋರಿಸಿದ್ದಾರೆ. ಈ ಊರಿನವರಂತೆ ಎಲ್ಲರೂ ಕೈಗೂಡಿ ಇಂತಹ ಕೆಲಸಗಳನ್ನು ಮಾಡಿದರೆ, ಆ ಊರು ಸ್ವಚ್ಛತೆಯಲ್ಲಿ ದೊಡ್ಡ ಹೆಸರು ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ ಅಲ್ಲವೇ..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article