ಫೆಡರಲ್ ಟ್ರೇಡ್ ಕಮಿಷನ್ ಫೇಸ್ಬುಕ್ಗೆ ಸುಮಾರು 34,280 ಕೋಟಿ ರೂ ದಂಡ ವಿಧಿಸಲು ಅನುಮೋದನೆ ನೀಡಿದೆ ಅಂತ ವರದಿಯಾಗಿದೆ..!
ಫೆಡರಲ್ ಟ್ರೇಡ್ ಕಮಿಷನ್ ಕ್ರೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣದ ಬಳಿಕ ಕಂಪನಿಗಳ ಗೌಪ್ಯತೆ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ. ಫೇಸ್‌ಬುಕ್ 50 ಮಿಲಿಯನ್ಗಿಂತಲೂ ಬಳಕೆದಾರರ ಖಾಸಗಿ ಮಾಹಿತಿಯನ್ನು ಗೌಪ್ಯವಾಗಿರುಸವಲ್ಲಿ ವಿಫಲವಾಗಿದೆ ಎಂದು ದಂಡ ವಿಧಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಮತ್ತು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ದಂಡದ ಪ್ರಸ್ತಾಪಕ್ಕೆ ನ್ಯಾಯಾಂಗ ಇಲಾಖೆ ಅನುಮೋದನೆ ನೀಡೋ ನಿರೀಕ್ಷೆ ಇದೆ ಎಂದೇ ಹೇಳಲಾಗುತ್ತಿದೆ.
ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಶುಕ್ರವಾರ ಮಧ್ಯಾಹ್ನ 3-2 ಮತಗಳಿಂದ ಪ್ರಕರಣ ಇತ್ಯರ್ಥಕ್ಕೆ ಅನುಮೋದನೆ ನಿಡಲಾಗಿದೆ ಎಂದು ವರದಿಯಲ್ಲಿದೆ.
ರಾಜಕೀಯ ಸಲಹೆಗಾರ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾ 50ಮಿಲಿಯನ್ ಗಿಂತಲೂ ಹೆಚ್ಚು ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಗೌಪ್ಯವಾಗಿರಿಸುವಲ್ಲಿ ವಿಫಲವಾಗಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದ ನಂತರದಲ್ಲಿ ಮಾರ್ಚ್ 2018 ರಲ್ಲಿ ಎಫ್‌ಟಿಸಿಗಳ ತನಿಖೆ ಆರಂಭವಾಗಿದೆ. 5 ಬಿಲಿಯನ್ ದಂಡವು ಸಾಮಾಜಿಕ ಮಾದ್ಯಮ ಆಧಾರಿತ ಸಂಸ್ಥೆಯೊಂದರ ಮೇಲೆ ಎಫ್‌ಟಿಸಿ ವಿಧಿಸಿದ ಅತಿದೊಡ್ಡ ದಂಡದ ಮೊತ್ತವಾಗಿದೆರ ಎಂದು ತಿಳಿದು ಬಂದಿದೆ.