ಫೇಸ್‌ಬುಕ್‌ನಲ್ಲೇ ಬರಲಿದೆ ಕ್ಲಬ್‌ಹೌಸ್!

1
29

ಟ್ವಿಟ್ಟರ್ , ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಸೋಷಿಯಲ್ ಮೀಡಿಯಾಗಳು ಡಿಜಿಟಲ್ ನಿಯಮಗಳನ್ನು ಪಾಲಿಸಬೇಕೆ, ಬೇಡವೇ ಚರ್ಚೆ ನಡೆಯುತ್ತಿರುಗಾವಲೇ , ಕ್ಲಬ್ ಹೌಸ್ ಎಂದ ಆಡಿಯೋ ನೆಟ್‌ವರ್ಕಿಂಗ್ ಅಪ್ಲಿಕೇಷನ್ ಹುಟ್ಟಿಕೊಂಡಿದೆ, ಅದಕ್ಕೆ ಸ್ಪರ್ಧೆ ನೀಡಲು ಫೇಸ್‌ಬುಕ್ ಲೀವ್ ಆಡಿಯೋ ಹೊರತಂದಿದೆ.
ಈ ಅಪ್ಲಿಕೇಷನ್ ಜನಪ್ರಿಯತೆಯನ್ನು ಕಂಡು ದಂಗಾಗಿರುವ ಸೋಷಿಯಲ್ ಮೀಡಿಯಾ ದೈತ್ಯ ಕಂಪನಿಗಳು ಇಂಥದ್ದೇ ಅಪ್ಲಿಕೇಷನ್ ಪರಿಚಯಿಸಲು ಮುಂದಾಗಿವೆ. ಫೇಸ್‌ಬುಕ್, ಟ್ವಿಟ್ಟರ್, ಡಿಸ್ಕಾರ್ಡ್‌, ರೆಡಿಟ್, ಸ್ಲ್ಯಾಕ್ ನಂಥ ಆಪ್‌ಗಳು ಧ್ವನಿಯಾಧಾರಿತ ಸೇವೆ ನೀಡಲು ಯೋಜಿಸುತ್ತಿವೆ.


ಫೇಸ್‌ಬುಕ್ ತನ್ನ ಬಳಕೆದಾರರಿಗಾಗಿ ಲೈವ್ ಆಡಿಯೋ ಹಾಗೂ ಪಾಡ್‌ಕಾಸ್ಟ್‌ಗಳನ್ನು ಹೊರತಂದಿದೆ. ಕ್ಲಬ್‌ಹೌಸ್‌ಗೆ ಸ್ಪರ್ಧೆ ನೀಡಲು ಫೆಸ್‌ಬುಕ್ ಅಮೆರಿಕದಲ್ಲಿ ಲೈವ್ ಆಡಿಯೋ ರೂಮ್ ತೆರೆದು ಜನರು ತೊಡಗಿಸಿಕೊಳ್ಳುವಂತೆ ನೋಡಿಕೊಂಡಿದೆ.
ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್‌ನಲ್ಲಿ ಲೈವ್ ಆಡಿಯೋ ರೂಮ್ ಆರಂಭಿಸಿದ್ದಾರೆ. ಹಾಗೆಯೇ ಅದರಲ್ಲಿ ಪ್ರಸಿದ್ಧ ವ್ಯಕ್ತಿಗಳ ಜತೆಗೆ ಮುಕ್ತವಾಗಿ ಜನರು ಚರ್ಚೆ ನಡೆಸಬಹುದು. ವೆರಿಫೈಡ್ ಖಾತೆಗಳ ಮೂಲಕ ವಿಡಿಯೋ ಅಪ್‌ಲೋಡ್ ಮಾಡಬಹುದಾದ ಅವಕಾಶವನ್ನು ಕೂಡ ನೀಡಲಾಗಿದೆ.
ಪ್ರಸಿದ್ಧ ವ್ಯಕ್ತಿಗಳು ಅಮೆರಿಕದಲ್ಲಿ ಈಗಾಗಲೇ ಲೈವ್ ವಿಡಿಯೋ ಮಾಡಲು ಐಒಎಸ್ ಬಳಕೆ ಮಾಡಲಾಗುತ್ತಿತ್ತು. ಇದರಲ್ಲಿ 50 ಮಂದಿ ಮಾತನಾಡಬಹುದು ಎಷ್ಟು ಮಂದಿ ಬೇಕಾದರೂ ಕೇಳಿಸಿಕೊಳ್ಳಬಹುದು.


ಆಂಡ್ರಾಯ್ಡ್ ಮೊಬೈಲ್ ಹೊಂದಿರುವವರಿಗೆ ಕೇವಲ ಕೇಳಿಸಿಕೊಳ್ಳಲು ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರಸಿದ್ಧ ವ್ಯಕ್ತಿಗಳು ಸ್ನೇಹಿತರು, ವೆರಿಫೈಡ್ ಬಳಕೆದಾರರು ಹಾಗೂ ಯಾವುದೇ ಕೇಳುಗರನ್ನು ಆಹ್ವಾನಿಸಬಹುದು.
ಫೇಸ್‌ಬುಕ್ , ಟ್ವಿಟ್ಟರ್ ಖಾಲಿ ಸೈಟ್‌ಗಳಾಗುತ್ತಿದ್ದು, ಕ್ಲಬ್‌ಹೌಸ್ ಫುಲ್ ಆಗುತ್ತಿದೆ, ಆಡಿಯೋ ವೇದಿಕೆಯಾಗಿರುವ ಈ ಆಪ್‌ನಲ್ಲಿ ಚಾಟ್ ರೂಮ್‌ಗಳಲ್ಲಿ ಎಷ್ಟು ಬೇಕಾದರೂ ಜನರು ಭಾಗವಹಿಸಬಹುದು. ವಿಚಾರ ಸಮೃದ್ಧ ಚರ್ಚೆಗಳನ್ನು ಮಾಡಬಹುದು.

1 COMMENT

LEAVE A REPLY

Please enter your comment!
Please enter your name here