ಫೇಸ್ ಬುಕ್ಗೆ 81 ಕೋಟಿ ದಂಡ..!! ಇದಕ್ಕೆ ಕಾರಣವೇನು ಗೊತ್ತಾ..?
ಫೇಸ್ ಬುಕ್ ಎಂಬ ಈ ಆ್ಯಪ್ ವಿಶ್ವದಲ್ಲಿ ದೊಡ್ಡ ಹೆಸರನ್ನ ಪಡೆದುಕೊಂಡಿದೆ.. ಕೋಟ್ಯಾಂತರ ಚಂದದಾರರನ್ನ ಹೊಂದಿರುವ ಫೇಸ್ ಬುಕ್ ಸಂಸ್ಥೆಗೆ 81 ಕೋಟಿ ದಂಡ ವಿಧಿಸಲಾಗಿದೆ.. ಇದಕ್ಕೆ ಕಾರಣ ತನ್ನ ಬಳಕೆದಾರರ ಮಾಹಿತಿಯನ್ನ, ಬಳಕೆದಾರರಿಗೆ ತಿಳಿಸದ ಮಾರಾಟ ಮಾಡಿದೆ.. ಹೌದು, ಇಟಲಿ ದೇಶದ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡಿದೆ..
ಸೈನ್ ಅಪ್ ಆಗುವ ಸಂದರ್ಭದಲ್ಲಿ ನೀಡುವ ಈ ಮಾಹಿತಿಯನ್ನ ಗೌಪ್ಯವಾಗಿ ಇಡಬೇಕಾದ ಜವಬ್ದಾರಿ ಫೇಸ್ ಬುಕ್ ಸಂಸ್ಥೆಯದಾಗಿದ್ದು, ಇದನ್ನ ಮಾರಾಟ ಮಾಡುವ ಮೂಲಕ ತನ್ನ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಬಗ್ಗೆ ಇಟಲಿಯ ಎಸಿಜಿಎಂ ಪ್ರಾಧಿಕಾರ ತಿಳಿಸಿದೆ.. ಜೊತೆಗೆ ಮಾಡಿದ ತಪ್ಪಿಗಾಗಿ 81 ಕೋಟಿ ದಂಡ ವಿಧಿಸಿದ್ದು ಮಾತ್ರವಲ್ಲದೆ, ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಹಾಗು ಆ್ಯಪ್ ನಲ್ಲಿ ಕ್ಷಮಾಪಣೆ ಕೇಳುವಂತೆ ಎಸಿಜಿಎಂ ಪ್ರಾಧಿಕಾರ ಸೂಚಿಸಿದೆ..