ಫೇಸ್ ಬುಕ್ ನಲ್ಲಿ ಮೋಸ ಹೋಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿದೆ. ಫೇಸ್ ಬುಕ್ ನಿಂದಾಗಿ ಪರಿಚಯ ಇಲ್ಲದವರು ಸಹ ಪರಿಚಿತರಾಗಿ ತದನಂತರ ವಂಚನೆ ಮಾಡುತ್ತಿದ್ದಾರೆ. ಗುರಗಾಂವ್ ನಿವಾಸಿಯಾದ ಅಭಿಷೇಕ್ ಮಿಶ್ರಾ ಎಂಬುವವರು ಯುವತಿಯನ್ನು ನಂಬಿ 19.3 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಫೇಸ್ ಬುಕ್ ನಲ್ಲಿ ಪೋಲೆಂಡ್ ದೇಶದವಳೆಂದು ಮರಿಯಾ ಪಟೇಲ್ ಎಂಬ ಯುವತಿ ಅಭಿಷೇಕ್ ಮಿಶ್ರಾ ಅವರಿಗೆ ಪರಿಚಿತರಾಗಿ ವಾಟ್ಸಾಪ್ ಮುಖಾಂತರ ಚಾಟಿಂಗ್ ಆರಂಭಿಸಿದ್ದಾಳೆ. ಹೀಗೆ ಪರಿಚಯವಾದ ನಂತರ ತಾನು ದೆಹಲಿಯಲ್ಲಿ ಐವಿಎಫ್ ಸೆಂಟರ್ ತೆರೆಯಲು ಭಾರತಕ್ಕೆ ಬರುತ್ತಿದ್ದೇನೆ & ಸಹಾಯ ಬೇಕೆಂದು ಅಭಿಷೇಕ್ ಬಳಿ ಹೇಳಿದ್ದಾಳೆ.
ಹೀಗೆ ಒಂದು ದಿನ ಮರಿಯಾ ಮುಂಬೈ ಏರ್ ಪೋರ್ಟ್ ನಲ್ಲಿ ತನ್ನನ್ನು ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅಭಿಷೇಕ್ ಗೆ ಕಾಲ್ ಮಾಡಿದ್ದಾಳೆ. ಇದನ್ನು ನಂಬಿ ಏರ್ ಪೋರ್ಟ್ ಗೆ ಹೋದಾಗ ಅಲ್ಲೊಬ್ಬ ಫೇಕ್ ಕಸ್ಟಮ್ ಅಧಿಕಾರಿ ಮರಿಯಾ ಅನುಮತಿಯಿಲ್ಲದೆ 2 ಲಕ್ಷ ಯೂರೋಸ್ ಅನ್ನು ತಂದಿದ್ದಾಳೆ ಹೀಗಾಗಿ ಅದಕ್ಕೆ ತೆರಿಗೆ ಕಟ್ಟಿದರೆ ಆಕೆಯನ್ನು ಬಿಡುತ್ತೇವೆ ಎಂದು ಹೇಳಿದ್ದಾನೆ. ಹೀಗಾಗಿ 1930000 ರೂಪಾಯಿಗಳನ್ನು ಒಂದು ವಾರ ಹಂತ ಹಂತವಾಗಿ ಅಭಿಷೇಕ್ ಕಟ್ಟಿದ್ದಾನೆ. ಇಷ್ಟೆಲ್ಲಾ ಆದಮೇಲೂ ಮತ್ತೊಮ್ಮೆ 3 ಲಕ್ಷ ಕಟ್ಟಿ ಎಂದು ಹೇಳಿದಾಗ ಅಭಿಷೇಕ್ ನಿರಾಕರಿಸಿದ್ದಾನೆ.
ಮರಿಯಾಗೆ ಕಾಲ್ ಮಾಡಿದರೆ ಆಕೆಯ ನಂಬರ್ ಸ್ವಿಚ್ ಆಫ್ & ಆ ಫೇಕ್ ಅಧಿಕಾರಿಯದ್ದೂ ಸಹ ಅದೇ ಕತೆ. ಇಷ್ಟೆಲ್ಲಾ ಆದ ನಂತರ ತಾನು ಮೋಸ ಹೋಗಿರುವ ವಿಷಯ ಅಭಿಷೇಕ್ ಗೆ ತಿಳಿದುಬಂದಿದೆ & ಸೈಬರ್ ಪೊಲೀಸರಿಗೆ ದೂರು ನೀಡಿದ್ದು ಬಂಧಿಸುವ ಭರವಸೆ ನೀಡಿದ್ದಾರೆ.