ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿ ಶವ ಪತ್ತೆ !?

admin
By admin
0 Min Read

ಬಿ.ಸಿ.ರೋಡಿನ ವಿವೇಕಾನಗರದಲ್ಲಿರುವ ಖಾಸಗಿ ಆಸ್ಪತ್ರೆಯ ಮುಂಭಾಗದ ಖಾಲಿ ನಿವೇಶನದಲ್ಲಿ ಪೊಲೀಸ್ ಪೇದೆಯೊಬ್ಬರ ಶವ ಮಂಗಳವಾರ ಸಂಜೆ ಪತ್ತೆಯಾಗಿದೆ.

ಮಂಗಳೂರಿನಲ್ಲಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಂಟ್ವಾಳದ ಚೆಂಡ್ತಿಮಾರ್ ನಿವಾಸಿ ಜಗದೀಶ(30) ಎಂಬವರ ಮೃತದೇಹವೆಂದು ಪೊಲೀಸರು ಗುರುತಿಸಿದ್ದಾರೆ. ಖಾಸಗಿ ಆಸ್ಪತ್ರೆಯ ಮುಂಭಾಗದ ಖಾಲಿ ನಿವೇಶನದ ಮೂಲೆಯಲ್ಲಿ ಮಣ್ಣಿನ ರಾಶಿಯ ಹಿಂಭಾಗದಲ್ಲಿ ಮೃತದೇಹ ಕಂಡು ಬಂದಿದ್ದು, ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದಾಗ ಜಗದೀಶ್ ಅವರ ಮೃತದೇಹ ಎಂದು ಗೊತ್ತಾಗಿದೆ.

ಅವಿವಾಹಿತರಾಗಿರುವ ಇವರು ಮಂಗಳೂರಿನಲ್ಲಿ ಡಿಎಆರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Share This Article