ಕೊರೊನಾ ಮಹಾಮಾರಿಯಿಂದಾಗಿ ಚಿತ್ರರಂಗವಷ್ಟೇ ಅಲ್ಲ ಪ್ರತಿಯೊಂದು ಕ್ಷೇತ್ರ ಕೂಡಾ ಅಪಾರ ನಷ್ಟವನ್ನ ಅನುಭವಿಸುವಂತಾಗಿದೆ. ಚಿತ್ರರಂಗ ಸದಾ ಚಟುವಟಿಕೆಯಿಂದ ಕೂಡಿರಬೇಕು ಅಂದರೆ ಸಿನಿಮಾದ ಶೂಟಿಂಗ್, ಹೊಸ ಹೊಸ ಸಿನಿಮಾಗಳ ಅನೌನ್ಸ್, ಸಿನಿಮಾ ಥಿಯೇಟರ್ ಗಳು ಕಾರ್ಯ ನಿರ್ವಹಿಸಬೇಕು. ಹೀಗಾಗಿ ಚಿತ್ರರಂಗ ಸಹಜ ಸ್ಥಿತಿಗೆ ಮರಳಲಿ ಅಂತಾ ಸಾಕಷ್ಟು ಜನರು ದೇವರ ಮೊರೆ ಹೋಗಿದ್ದಾರೆ. ಇದೀಗ ದೇ ಹಾದಿಯಲ್ಲಿ ಸಲಗ ಚಿತ್ರತಂಡ ಈ ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ನಗರದ ಬಂಡಿ ಮಾಕಾಳಮ್ಮನ ದರ್ಶನ ಪಡೆದು, ಚಿತ್ರರಂಗ ಆದಷ್ಟು ಬೇಗ ಮೊದಲಿನಂತೆ ಕಾರ್ಯನಿರ್ವಹಿಸಲಿ ಅಂತಾ ವಿಶೇಷ ಪೂಜೆ ಮಾಡಿಸಿದೆ. ಇನ್ನು ಈ ಸಂದರ್ಭದಲ್ಲಿ ನಟ ನಿರ್ದೇಶಕ ದುನಿಯಾ ವಿಜಯ್, ಸಲಗ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹಾಗೂ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಕೋಟಿ ಕೋಟಿ ಭಾರತೀಯರ ಶತಮಾನಗಳ ಕನಸು ನನಸು! ಮೋದಿಯಿಂದ ರಾಮಮಂದಿರಕ್ಕೆ ಭೂಮಿಪೂಜೆ