ಬಟಾಣಿಯಲ್ಲಿ ಬಳಕೆಯಾಗ್ತಿದೆ ಕೃತಕ ಹಸಿರು ಕಲರ್: ಆಹಾರ ಇಲಾಖೆಯ ಲ್ಯಾಬ್ ವರದಿಯಲ್ಲಿ ಆಘಾತಕಾರಿ ಅಂಶ

Date:

ಬಟಾಣಿಯಲ್ಲಿ ಬಳಕೆಯಾಗ್ತಿದೆ ಕೃತಕ ಹಸಿರು ಕಲರ್: ಆಹಾರ ಇಲಾಖೆಯ ಲ್ಯಾಬ್ ವರದಿಯಲ್ಲಿ ಆಘಾತಕಾರಿ ಅಂಶ

ಬೆಂಗಳೂರು: ಇತ್ತೀಚೆಗೆ ಗೋಬಿ ಮಂಚೂರಿ, ಬಾಂಬೆ ಮಿಠಾಯಿ ರಾಜ್ಯದಲ್ಲಿ ಬ್ಯಾನ್ ಆಗಿದ್ದ ಬೆನ್ನಲ್ಲೇ ಕರಿದ ಬಟಾಣಿಗೆ ಕೃತಕ ಬಣ್ಣ ಹಾಕಿ ಮಾರಾಟ ಮಾಡುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕರಿದ ಬಟಾಣಿಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಲ್ಯಾಬ್‌ಗ ಕಳುಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಇದೀಗ ಹಸಿರು ಬಟಾಣಿಗಳಿಗೆ ಕೃತಕ ಬಣ್ಣದ ಬಳಕೆಯಿಂದಾಗಿ ಅವು ಅಸುರಕ್ಷಿತವಾಗಿರುವುದನ್ನು ಬೆಂಗಳೂರಿನ ಆಹಾರ ಇಲಾಖೆ ಪತ್ತೆಹಚ್ಚಿದೆ.
ಹೌದು ಬೆಂಗಳೂರಿನ ವಿವಿಧ ಭಾಗದಲ್ಲಿನ ಸುಮಾರು 36 ಮಾದರಿಯ ಹಸಿರು ಬಟಾಣಿ ಮಾದರಿಗಳನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಇದೀಗ ಪ್ರಯೋಗಾಲಯ ವರದಿ ಬಂದಿದ್ದು, 28 ಕ್ಕೂ ಹೆಚ್ಚು ಹಸಿರು ಬಟಾಣಿ ಮಾದರಿಗಳು ಅಸುರಕ್ಷಿತ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.
ಬಟಾಣಿ ಹಸಿರಾಗಿ ಕಾಣಲು ಕೃತಕ ಬಣ್ಣ ಬಳಸಲಾಗುತ್ತಿದೆ ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ. ಕಲರ್ ಬಳಕೆಯಿಂದ ಬಟಾಣಿ ಸಾಮಾನ್ಯಕ್ಕಿಂತ ಹೆಚ್ಚು ಹಸಿರಾಗಿ ಕಾಣುತ್ತಿದ್ದು, ಜನರನ್ನು ಆಕರ್ಶಿಸುತ್ತಿದೆ. ಬಟಾಣಿಯಲ್ಲಿ ಬಣ್ಣ ಬಳಕೆ ಮಾಡುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಬಟಾಣಿಯ ಬಣ್ಣ ಕಿಡ್ನಿಯ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆ ಕೃತಕ ಬಣ್ಣ ಬಳಸಿ ಬಟಾಣಿ ಮಾರಟ ಮಾಡುವ ವ್ಯಾಪರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಶುಷ್ಕ ವಾತಾವರಣ ಮುಂದುವರಿಕೆ; ಇನ್ನೆರಡು ದಿನ ಚಳಿ ಪ್ರಭಾವ ಹೆಚ್ಚಳ

ರಾಜ್ಯದಲ್ಲಿ ಶುಷ್ಕ ವಾತಾವರಣ ಮುಂದುವರಿಕೆ; ಇನ್ನೆರಡು ದಿನ ಚಳಿ ಪ್ರಭಾವ ಹೆಚ್ಚಳ ಬೆಂಗಳೂರು:...

ಸುಸ್ತಾಗುತ್ತೆ ಎಂದು ಮಲ್ಟಿವಿಟಮಿನ್‌ ಸೇವನೆ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ!

ಸುಸ್ತಾಗುತ್ತೆ ಎಂದು ಮಲ್ಟಿವಿಟಮಿನ್‌ ಸೇವನೆ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ! ಆರೋಗ್ಯ ಕಾಪಾಡಿಕೊಳ್ಳುವುದು...

ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಇ-ಮೇಲ್, ತೀವ್ರ ತಪಾಸಣೆ

ಮೈಸೂರು, ಬಾಗಲಕೋಟೆ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಇ-ಮೇಲ್, ತೀವ್ರ ತಪಾಸಣೆ ಮೈಸೂರು/ಬಾಗಲಕೋಟೆ: ಕಳೆದ...

ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ, ಗುಡ್ ಲಕ್: ಡಿಸಿಎಂ ಡಿ.ಕೆ. ಶಿವಕುಮಾರ್

ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ, ಗುಡ್ ಲಕ್: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು: “ಸಿದ್ದರಾಮಯ್ಯ...