ಹಾಸನದಲ್ಲಿ ಬರ ನಿರ್ವಹಣೆ ಕುರಿತು ಕೋಪಗೊಂಡ ಸಚಿವ ರೇವಣ್ಣ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ. ಹಾಸನದಲ್ಲಿ ಬುಧವಾರ ಮಾತನಾಡಿದ ಅವರು, ಬರ ನಿರ್ವಹಣೆ ಕುರಿತಂತೆ ಗೋಲಿಬಾರ್ ನಡೆದರೆ ಅದಕ್ಕೆ ಜಿಲ್ಲಾಧಿಕಾರಿಯೇ ಹೊಣೆಯಾಗುತ್ತಾರೆ ಎಂದು ಹೇಳಿದಾರೆ.
ಬರಗಾಲವನ್ನು ನಿಭಾಯಿಸಲು ಎಂಟು ಕೋಟಿ ರೂ ನೀಡಲಾಗಿದೆ ಆದರೆ ಒಂದೇ ಒಂದು ಪೈಸೆಯಲ್ಲೂ ಖರ್ಚು ಮಾಡಿಲ್ಲ. ಈಗ ನೋಡಿದರೆ ಹಣವೇ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮೇರಿ ಫ್ರಾನ್ಸಿಸ್, ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದೇವೆ ಅನುದಾನವೂ ಸರಿಯಾಗಿಯೇ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ.
ಟ್ಯಾಂಕರ್ಗಳಿಂದಲೂ ನೀರು ಪೂರೈಸುವ ಕಾರ್ಯ ನಡೆಯತ್ತಿದೆ. ಬರ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಕ್ತಾಯದ ಹಂತದಲ್ಲಿದೆ. ಅರಸೀಕೆರೆಯಲ್ಲಿ ಬಾಡಿಗೆ ನೀಡಿ ಕೊಳವೆ ಬಾವಿಗಳಿಂದ ನೀರು ಖರೀದಿಸಿ ಜನತೆಗೆ ಒದಗಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.