ಬಸ್ ನಿಲ್ಲಿಸಲಿಲ್ಲ ಎಂದು ತಮಿಳುನಾಡು ಬಸ್‌ʼಗೆ ಕಲ್ಲೇಟು! ಯುವಕ ಅರೆಸ್ಟ್

tnit editors
1 Min Read

ಬೆಂಗಳೂರು: ಬಸ್ ನಿಲ್ಲಿಸಲಿಲ್ಲ ಎಂದು ಯುವಕ ತಮಿಳುನಾಡು ಸರ್ಕಾರಿ ಬಸ್‌ಗೆ ಯುವಕನೊಬ್ಬ ಕಲ್ಲೇಟು ಹೊಡೆದಿದ್ದು, ಬಸ್‌ ಹಿಂಬದಿ ಗಾಜು ಪುಡಿ ಪುಡಿಯಾಗಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ತಿರುವಣ್ಣಮಲೈಗೆ ಬೆಂಗಳೂರಿನಿಂದ ಬಸ್‌ ಹೋಗುತ್ತಿತ್ತು. ಟೌನ್‌ ಹಾಲ್‌ ಬಳಿ ಚಲಿಸುತ್ತಿದ್ದ ಬಸ್‌ ಗೆ ಯುವಕ ಕಲ್ಲೇಟು ಹೊಡೆದಿದ್ದಾನೆ.
ಬಸ್‌ ಚಾಲಕ ಮತ್ತು ಕಂಡಕ್ಟರ್‌ ಪರಾರಿಯಾಗಲು ಯತ್ನಿಸಿದ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೆಟ್‌ಲೈಟ್‌ನಲ್ಲೇ ಬಸ್ ಫುಲ್ ರಶ್ ಅಗಿತ್ತು. ಹಾಗಾಗಿ ನಿಲ್ಲಿಸಿರಲಿಲ್ಲ. ಬಸ್ ನಿಲ್ಲಿಸಲಿಲ್ಲ ಎಂದು ಕೋಪಗೊಂಡ ಯುವಕ ಕಲ್ಲು ಹೊಡೆದಿದ್ದಾನೆ. ತಮಿಳುನಾಡು ಮೂಲದ ಮಹಾರಾಜ ಎಂಬ ಯುವಕನನ್ನು ಎಸ್‌ಜೆ ಪಾರ್ಕ್‌ ಪೊಲೀಸರು ವಶಕ್ಕೆ ಪಡೆದಿದ್ದು, ಈ ಘಟನೆ ಸಂಬಂಧ ಎಸ್‌ ಜೆ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article