ಎಲೆಕ್ಷನ್ ಮುಗಿದೆ ಮೇಲೆ ಸುಮಲತಾ ಅಂಬರೀಶ್ ಮತ್ತು ತಂಡ ಮಂಡ್ಯದಲ್ಲಿ ಇರಲ್ಲ. ಸಿಂಗಾಪುರಕ್ಕೆ ಹೋಗುತ್ತಾರೆ.ಟೂರಿಂಗ್ ಟಾಕೀಸ್ ಜಾಗ ಖಾಲಿ ಮಾಡುತ್ತದೆ ಎಂದು ಟೀಕಿಸುತ್ತಿದ್ದ ಸಿಎಂ ಕುಮಾರಸ್ವಾಮಿ ಸೇರಿದಂತೆ ಮೈತ್ರಿಯ ಪ್ರಮುಖ ನಾಯಕರಿಗೆ ಯಾರೂ ಯೋಚಿಸದ ರೀತಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಉತ್ತರ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ಆರಾಮಾಗಿ, ಮುಕ್ತವಾಗಿ ರಿಲ್ಯಾಕ್ಸ್ ಮೂಡಿನಲ್ಲಿ ಅಭಿಷೇಕ್ ಸುತ್ತಾಡಿದ್ದಾರೆ. ಸ್ನೇಹಿತರ ಜೊತೆ ಸೇರಿ ರಸ್ತೆ ಬದಿ ಕುಳಿತು ಟೀ ಕುಡಿದು ಹರಟೆ ಹೊಡೆದಿದ್ದಾರೆ. ಈ ರೀತಿಯಾಗಿ ನಾವು ಎಲೆಕ್ಷನ್ ಮುಗಿದರೂ ಇಲ್ಲೇ ಇದ್ದೀವಿ. ಸಿಂಗಾಪುರಕ್ಕೆ ಹೋಗಿಲ್ಲ ಎಲ್ಲಿಯೂ ಹೋಗಿಲ್ಲ.. ಮಂಡ್ಯದಲ್ಲೇ ಉಳಿದುಕೊಂಡಿದ್ದೀವಿ. ಎಲ್ಲಿ ಬೇಕಾದರೂ ಮುಕ್ತವಾಗಿ ಸಿಗುತ್ತೇವೆ ಎಂಬುದನ್ನು ಅಭಿ ಸಾರಿದ್ದಾರೆ ಅನಿಸುತ್ತದೆ.
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಸುಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಅಂಬರೀಶ್ ಅವರ ನಡುವೆ ಪ್ರಬಲ ಸ್ಪರ್ಧೆ ಇದೆ. ಇವರಲ್ಲಿ ಯಾರು ಗೆಲ್ಲುತ್ತಾರೆ ಎಂದು ತಿಳಿಯಲು ಮೇ.23ರವರೆಗೆ ಕಾಯಲೇ ಬೇಕು.
ಬಹುಶಃ ಅಭಿಷೇಕ್ ಹೀಗೆ ಮಾಡಿದ್ದು ಸಿಎಂ ಪಡೆಗೆ ಉತ್ತರ ಕೊಡಲು..!?
Date: