ಬಾಕ್ಸಿಂಡ್ ಡೇ ಸೋಲಿಗೆ ಆಸೀಸ್ ನಾಯಕ ಕೊಟ್ಟ ಕಾರಣ ಏನ್ ಗೊತ್ತಾ?

Date:

ಬಾಕ್ಸಿಂಡ್ ಡೇ ಸೋಲಿಗೆ ಆಸೀಸ್ ನಾಯಕ ಕೊಟ್ಟ ಕಾರಣ ಏನ್ ಗೊತ್ತಾ?

ಬ್ಯಾಟಿಂಗ್‌ನಲ್ಲಿ ರನ್‌ ಗಳಿಸದೇ ಹೋದದ್ದು ಮತ್ತು ಕಳಪೆ ಕ್ಷೇತ್ರರಕ್ಷಣೆಯೊಂದಿಗೆ ಕ್ಯಾಚ್‌ಗಳನ್ನು ಕೈಚೆಲ್ಲಿದ್ದೇ ಟೀಮ್ ಇಂಡಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್‌ ಗ್ರೌಂಡ್‌ (ಎಂಸಿಜಿ)ನಲ್ಲಿ ನಡೆದ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಸೋಲಿಗೆ ಮುಖ್ಯ ಕಾರಣವಾಯಿತು ಎಂದು ಆಸೀಸ್‌ ನಾಯಕ ಟಿಮ್‌ ಪೇಯ್ನ್‌ ಹೇಳಿಕೊಂಡಿದ್ದಾರೆ.
ಇದೇ ವೇಳೆ ಭಾರತ ತಂಡದ ಬೌಲಿಂಗ್‌ ವಿಭಾಗದ ಶಿಸ್ತಿನ ದಾಳಿಯನ್ನು ಕೊಂಡಾಡಿದ ಆಸ್ಟ್ರೇಲಿಯಾ ತಂಡದ ನಾಯಕ, ಟೀಮ್ ಇಂಡಿಯಾ ತನ್ನ ಯೋಜನೆ ತಕ್ಕಂತೆ ಬೌಲಿಂಗ್‌ ಮಾಡಿ ಯಶಸ್ಸು ಕಂಡಿತು ಎಂದಿದ್ದಾರೆ.
“ಭಾರತ ತಂಡ ಅತ್ಯುತ್ತಮವಾಗಿ ಬೌಲಿಂಗ್‌ ಮಾಡುತ್ತಿದೆ. ತಂಡದ ಶಿಸ್ತನ್ನು ಮೆಚ್ಚಲೇ ಬೇಕು. ನಮ್ಮ ಬ್ಯಾಟ್ಸ್‌ಮನ್‌ಗಳು ಜೊತೆಯಾಟಗಳನ್ನು ಕಟ್ಟುವಲ್ಲಿ ವಿಫಲರಾದರು. ಸ್ಟೀವ್ ಸ್ಮಿತ್ ಮತ್ತು ಮಾರ್ನಸ್‌ ಅವರ ಸ್ಟಂಪ್‌ಗೆ ಗುರಿಯಿಟ್ಟು ಬೌಲಿಂಗ್‌ ಮಾಡಿದರು. ಈ ಮೊದಲೇ ಹೇಳಿದಂತೆ ಭಾರತ ತಂಡ ತನ್ನ ಯೋಜನೆಗಳಿಗೆ ತಕ್ಕಂತೆ ಬೌಲಿಂಗ್‌ ಮಾಡುತ್ತಿದೆ. ಹೀಗಾಗಿ ಸ್ಟೀವ್‌ ಕೂಡ ಹೆಚ್ಚು ಹೊತ್ತು ಬ್ಯಾಟ್‌ ಮಾಡಲು ಸಾಧ್ಯವಾಗಿಲ್ಲ. ಅವರು ಶೀಘ್ರವೇ ಲಯಕ್ಕೆ ಮರಳುವ ಅಗತ್ಯ ತಂಡಕ್ಕಿದೆ,” ಎಂದು ಪಂದ್ಯದ ಬಳಿಕ ಮಾತನಾಡಿದ ಟಿಮ್‌ ಪೇಯ್ನ್‌ ವಿವರಿಸಿದ್ದಾರೆ.

“ಆಪತ್ತನ್ನು ಎದುರಿಸದೇ ಇದ್ದರೆ ಫಲ ಸಿಗುವುದಿಲ್ಲ. ಆಟದ ಸ್ವಭಾವ ಇರುವುದೇ ಹಾಗೆ. ಪ್ರತಿಯೊಬ್ಬರು ಕೂಡ ಇದನ್ನು ವಿಭಿನ್ನ ರೀತಿಯಲ್ಲಿ ಮಾಡಿದ್ದಾರೆ. ಮ್ಯಾಥ್ಯೂ ವೇಡ್‌ ಸ್ವೀಪ್ ಹೊಡೆತಗಳನ್ನು ಆಡಿದರು. ಉಳಿದವರು ಕಾಲುಗಳನ್ನು ಹೆಚ್ಚು ಬಳಕೆ ಮಾಡಿದರು. ಕ್ಯಾಮರೂನ್‌ ಗ್ರೀನ್‌ ಆಫ್‌ ಸ್ಪಿನ್ನರ್‌ ಅಶ್ವಿನ್‌ ಎದುರು ಅಟ್ಯಾಕಿಂಗ್ ಆಟವಾಡಲಿಲ್ಲ. ಒಟ್ಟಾರೆ ಅಶ್ವಿನ್ ಎದುರು ಉತ್ತಮವಾಗಿಯೇ ಆಡಿದೆವು. ಪ್ರತಿಯೊಬ್ಬರಲ್ಲೂ ಯೋಜನೆಗಳಿವೆ. ಅದರ ಬಗ್ಗೆ ಆತ್ಮವಿಶ್ವಾಸವೂ ಇದೆ,” ಎಂದಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಜನವರಿ 7ರಂದು ಆರಂಭವಾಗಲಿರುವ ಮೂರನೇ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯಬೇಕಿದೆ. ಆದರೆ, ಅಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೆಲ್ಬೋರ್ನ್‌ನಲ್ಲೇ 3ನೇ ಟೆಸ್ಟ್‌ ಪಂದ್ಯ ಆಯೋಜನೆಯಾಗುವ ಸಾಧ್ಯತೆಯೂ ದಟ್ಟವಾಗಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...