ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೊ ಬಾತ್ರೂಂನಲ್ಲಿ ಬಿದ್ದು ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದರು! ಆದರೆ ಒಂದೇ ದಿನದಲ್ಲಿ ಅವರು ಸರಿ ಹೋಗಿದ್ದಾರೆ. ಸ್ವತಃ ಅವರೇ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಸರಕಾರದ ಅಧಿಕೃತ ನಿವಾಸದ ಬಾತ್ರೂಮಿನಲ್ಲಿ ಕಾಲುಜಾರಿ ಬಿದ್ದು ಗೋಡೆಗೆ ತಲೆ ಬಡಿದು ತಾತ್ಕಾಲಿಕವಾಗಿ ನೆನಪಿನ ಶಕ್ತಿ ಕಳೆದುಕೊಂಡಿದ್ದೆ ಎಂದು ಜೈರ್ ಬೋಲ್ಸೋನಾರೊ ತಿಳಿಸಿದ್ದಾರೆ.
ಅಲ್ವೋರಾಡಾ ಪ್ಯಾಲೆಸಿನ ಸ್ನಾನದಗೃಹದಲ್ಲಿ ಸೋಮವಾರ ರಾತ್ರಿ ಜಾರಿ ಬಿದ್ದಿದ್ದೆ. ಈಗ ಆರೋಗ್ಯವಾಗಿದ್ದರೂ ನಿನ್ನೆಯ ಘಟನೆಯ ನೆನಪಾಗುತ್ತಿಲ್ಲ. ಅದಕ್ಕೂ ಹಿಂದಿನ ಹಲವು ನೆನಪು ಮರುಕಳಿಸುತ್ತಿದೆ ಎಂಬ ವಿಷಯವನ್ನು ದೂರವಾಣಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಸೋಮವಾರ ರಾತ್ರಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 2018ರಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಜೈರ್ ಮೇಲೆ ಚಾಕುವಿನಿಂದ ದಾಳಿ ನಡೆದಿತ್ತು.