ಬಾಯಿ ದುರ್ವಾಸನೆಗೆ ಮನೆ ಮದ್ದು

Date:

ಬಾಯಿ ದುರ್ವಾಸನೆ ತುಂಬಾ ಹಿಂಸೆ…ಇದ್ರ ಬಗ್ಗೆ ಪೀಠಿಕೆ ಹಾಕೋದೇನು ಬೇಡ ಅನ್ಸುತ್ತೆ. ಈ ಸಮಸ್ಯೆ ಇರೋ ವ್ಯಕ್ತಿಗೆ ಮುಜುಗರ, ಇವರ ಜೊತೆ ಮಾತಾಡೋರಿಗೆ ಕಿರಿಕಿರಿ.
ಈ ತೊಂದ್ರೆ ಬಗೆಹರಿಯದೇ ಇರೋದಂತೂ ಅಲ್ಲ. ಇದಕ್ಕೆ ಲಕ್ಷಗಟ್ಟಲೆ ಹಣ ಸುರಿಯೋದು ಬೇಕಿಲ್ಲ. ಮನೇಲೇ ಮದ್ದಿವೆ.


* ಮೆಂತೆ : ಮೆಂತೆ ಅಂತು ಎಲ್ಲರ ಮನೇಲಿ ಇದ್ದೇ ಇರುತ್ತೆ. ಒಂದೇ ಒಂದು ಸ್ಪೂನ್ ಮೆಂತೆ ತಗೊಂಡು ಕುದಿಸಿ. ಕುದಿಸಿದ ನೀರನ್ನ ಸೋಸಿ ಕುಡೀರಿ ದಿನಕ್ಕೆ ಒಂದ್ಸಲ ಹೀಗೆ ಮಾಡಿ. ಬಾಯಿ ದುರ್ವಾಸನೆ ಖಂಡಿತಾ ಹೋಗುತ್ತೆ.
*ಲವಂಗ : ಲವಂಗ ಕೂಡ ಮನೇಲಿ ಇರುತ್ತೆ. ಅಡುಗೆಗೆ ಬಳಸ್ತೀವಿ. ಹಲ್ಲುನೋವಿಗೆ ಒಳ್ಳೇ ಔಷಧ ಅಂತ ಗೊತ್ತೇ ಇದೆ. ಮೌತ್ ವಾಷ್, ಟೂತ್ ಪೇಸ್ಟ್ ಗಳಲ್ಲಿ ಬಳಸೋದು ಕೂಡ ನಿಮ್ಗೆ ಗೊತ್ತಿಲ್ದೆ ಇರೋ ವಿಷ್ಯವಲ್ಲ.
ಇದು ಬಾಯಿಯ ಕೆಟ್ಟವಾಸನೆಗೂ ರಾಮಬಾಣ. ಲವಂಗದಲ್ಲಿ ಯೂಜೆನೊಲ್ ಅನ್ನೋ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶ ಇದೆ. ಇದ್ರಿಂದ ಬಾಯಿಯ ವಾಸನೆ ಕಮ್ಮಿ ಆಗುತ್ತೆ. ಹಾಗಾಗಿ ಆಗಾಗ ಬಾಯಲ್ಲಿ ಲವಂಗ ಇಟ್ಕೊಂಡು ಜಗೀರಿ.
ದಾಲ್ಚೀನಿ : ಬಾಯಿಯ ವಾಸನೆ ಹೋಗಲಾಡಿಸೋ ಮತ್ತೊಂದು ಮನೆ ಮದ್ದು ದಾಲ್ಚೀನಿ. ಇದನ್ನು ಚೆನ್ನಾಗಿ ಕುದಿಸಿ, ಆ ನೀರಲ್ಲಿ ಬಾಯಿ ತೊಳ್ಕೊಳ್ಳಿ (ಮುಕ್ಕಳಿಸಿ). ಇದ್ರಿಂದ ವಾಸನೆ ಹೋಗುತ್ತೆ.
ಸೋಂಪು : ಸೋಂಪನ್ನು ಬಾಯಿಲಿ ಇಟ್ಕೊಂಡು ಆಗಾಗ ಜಗೀತಾ ಇರೋದ್ರಿಂದ ಬಾಯಿವಾಸನೆ ಹೋಗುತ್ತೆ.
ನೀರು : ಚೆನ್ನಾಗಿ ನೀರು ಕುಡೀರಿ. ಗಂಟಲಿಗೆ ನೀರು ಹಾಕ್ಕೊಂಡು ಗಾಗಲ್ ಮಾಡಿ. ಆಗ ಬಾಯಿ ವಾಸನೆ ಬರಲ್ಲ.

Share post:

Subscribe

spot_imgspot_img

Popular

More like this
Related

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...