ಮುಟ್ಟಿನ ನೋವಿಗೆ ಹೇಳಿ ಗುಡ್ ಬೈ!

0
886

ಮುಟ್ಟಿನ ನೋವು ಕೆಲವು ಮಹಿಳೆಯರನ್ನು ಅತ್ಯಂತ ಭೀತಿಗೊಳಪಡಿಸುತ್ತದೆ. ಕೆಲವರು ಈ ಸಮಯದಲ್ಲಿ ಸಾಮಾನ್ಯ ದಿನಗಳಲ್ಲಿರುವಂತೆಯೇ ದಿನದೂಡುತ್ತಾರೆ ಆದರೆ ಇನ್ನು ಕೆಲವರಲ್ಲಿ ತೀವ್ರವಾದ ಕಿಬ್ಬೊಟ್ಟೆ ನೋವು, ಸೆಳೆತ, ಕೆಳ ಬೆನ್ನು ನೋವು, ಆಯಾಸ ಮತ್ತು ವಾಕರಿಕೆ ಹೀಗೆ ಹಲವು ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ.

ಈ ಸಮಯದಲ್ಲಿ ಅಂತಹ ನೋವಿನಿಂದ ಮುಕ್ತಿ ಪಡೆಯಲು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮ ಶಾಲೆ ಹಾಗು ಉದ್ಯೋಗಕ್ಕೆ ರಜೆ ತೆಗೆದುಕೊಂಡಿರುವುದೂ ಇದೆ.

ಆದ್ದರಿಂದಲೇ ನಮ್ಮ ದೇಶದ ಅನೇಕ ಕಂಪನಿಗಳಲ್ಲಿ ತಮ್ಮಲ್ಲಿ ಕೆಲಸಕ್ಕಿರುವ ಮಹಿಳಾ ಸಹೋದ್ಯೋಗಿಗಳಿಗೆ ಮುಟ್ಟಿನ ಮೊದಲೆರಡು ದಿನ ಪ್ರತ್ಯೇಕವಾಗಿ ಸ್ವಯಂಘೋಷಿತ ರಜೆಯನ್ನು ನೀಡಲಾಗುತ್ತಿದೆ. ಈ ಸಮಸ್ಯೆಗೆ ಮನೆಯಲ್ಲಿಯೇ ನಾವು ಸೇವಿಸುವ ಆಹಾರದಿಂದ ತೊಂದರೆಯನ್ನು ಶಮನಮಾಡಿಕೊಳ್ಳಬಹುದು.

ಒಮೆಗಾ 3 : ಇದು ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಾಗುವ ಅಸ್ವಸ್ಥತೆಯನ್ನು ಸರಾಗಗೊಳಿಸಿ ದೇಹವನ್ನು ಉತ್ತೇಜಿಸಲು ಸಹಕರಿಸುತ್ತದೆ. ಆದ್ದರಿಂದ ಋತುಚಕ್ರದ ಸಮಯದಲ್ಲಿ ಮೀನು , ಮೊಟ್ಟೆ, ಸೊಯಾಬೀನ್ಸ್, ವಾಲ್ ನಟ್ಸ್, ಅಗಸೆಬೀಜಗಳು ಇವುಗಳನ್ನು ದೈನಂದಿನ ಆಹಾರ ಕ್ರಮಗಳಲ್ಲಿ ಉಪಯೋಗಿಸಬೇಕು.

ಜೀರಿಗೆ : ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಬೆರಸಿ, ಚೆನ್ನಾಗಿ ಕುದಿಸಿ, ನಂತರ ಶೋದಿಸಿ ಆ ನೀರನ್ನು ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here