ಕಳೆದ ಕೆಲ ದಿನಗಳ ಹಿಂದಷ್ಟೇ ಜಮ್ಮು ಕಾಶ್ಮೀರದ ಬಾರ್ಡರ್ ನಲ್ಲಿ ಸ್ನೇಹಿತರ ಜೊತೆಗೂಡಿ ನನ್ನ ಗೆಳತಿ ನನ್ನ ಗೆಳತಿ ಎಂಬ ಹಾಡನ್ನು ಕರ್ನಾಟಕದ ವೀರ ಯೋಧ ಒಬ್ಬ ಹಾಡಿದ್ದರು. ಹೌದು ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದ ಯೋಧ ಮಂಜುನಾಥ್ ಹನುಮಂತಪ್ಪ ಓಲೆಕಾರ್ ಎಂಬ ವೀರ ಯೋಧ ಈ ಹಾಡನ್ನು ಹಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಇದೀಗ ಆ ಹಾಡು ಹಾಡಿ ಎಲ್ಲೆಡೆ ವೈರಲ್ ಆಗಿದ್ದ ವೀರ ಯೋಧ ವೀರ ಮರಣವನ್ನು ಹೊಂದಿದ್ದು ಹುತಾತ್ಮರಾಗಿದ್ದಾರೆ. ಮಂಜುನಾಥ ಅವರು ಕಳೆದ ಆರು ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದರು ಮತ್ತು ಅವರ ಪತ್ನಿ ಇದೇ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ಇನ್ನು ಹುತಾತ್ಮರಾದ ವೀರ ಯೋಧರ ಕುಟುಂಬವನ್ನು ಅಧಿಕಾರಿಗಳು ಆದಷ್ಟು ಬೇಗ ಭೇಟಿಯಾಗಲಿದ್ದೇವೆ ಎಂದು ತಿಳಿಸಿದ್ದಾರೆ.