ಬಾಲಿವುಡ್ ಗೆ 80 ದಿನ ಮೀಸಲಿಟ್ಟ ಕಿಚ್ಚ..!‌ ಸಲ್ಮಾನ್ ಜೊತೆ ಸುದೀಪ್ ಸ್ಕ್ರೀನ್ ಶೇರ್, ಆ ಚಿತ್ರಕ್ಕೆ ಕನ್ನಡಿಗನೇ ಡೈರೆಕ್ಟರ್..!

Date:

ಅಭಿನಯ ಚಕ್ರವರ್ತಿ ಸುದೀಪ್ ಕೋಟಿಗೊಬ್ಬ 3, ಪೈಲ್ವಾನ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಈಗ ದಶಕ ಬಳಿಕ ಬಾಲಿವುಡ್ ಗೆ ಮತ್ತೊಂದು ಸುತ್ತು ಹೋಗಿ ಬರುವ ಉದ್ದೇಶ ಹೊಂದಿದ್ದು, ಆ ಕಡೆ ಮತ್ತೊಮ್ಮೆ ಮುಖ ಮಾಡಿದ್ದಾರೆ. ಸುದೀಪ್ ಹಿಂದೆ 3 ಹಿಂದಿ‌ ಚಿತ್ರಗಳಲ್ಲಿ ನಟಿಸಿದ್ದರು.
ಸುದೀಪ್ ದಶಕಗಳ ನಂತರ ಹಿಂದಿ ಚಿತ್ರವನ್ನು ಒಪ್ಪಿಕೊಂಡಿದ್ದು ಸಲ್ಮಾನ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ. ವಿಲನ್ ಆಗಿ ಸುದೀಪ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸಿನಿಮಾಕ್ಕೆ ಸಹಿ ಮಾಡಿರುವ ಸುದೀಪ 80 ದಿನಗಳ ಕಾಲ್ ಶೀಟ್ ನೀಡಿದ್ದಾರೆ.
ಶೂಟಿಂಗ್ ಕೂಡ ಆರಂಭವಾಗಿದ್ದು, ಸುದೀಪ್ ಇದಕ್ಕೆ ಸಂಬಂಧಪಟ್ಟಂತೆ ಟ್ವೀಟ್ ಮಾಡಿದ್ದಾರೆ. ‌ಇಂದು ನನಗೆ ತುಂಬಾ ಥ್ರಿಲ್ ಆಗುತ್ತಿದೆ.‌ ಇದೊಂದು ಎನರ್ಜಿ ತುಂಬಿದ ಸೆಟ್ ಆಗಿದೆ.ಒಳ್ಳೆಯ ಜನರೊಂದಿಗೆ ಕೆಲಸ ಮಾಡುತ್ತಿರುವುದು ಸಂತೋಷ ತಂದಿದೆ. ಮೊದಲ ದಿನವೇ ಶಕ್ತಿವಂಥ ನಟನ ಜೊತೆ ಜಿಮ್ ಮಾಡಿದ್ದೇನೆ. ನನ್ನ ಸ್ವಂತ ಮನೆಯಲ್ಲಿ ನಾನಿದ್ದೇನೆ ಎನ್ನುವಂತಹ ವಾತಾವರಣನ್ನು ಸಲ್ಮಾನ್ ಖಾನ್ ಸೃಷ್ಟಿ ಮಾಡಿದ್ದಾರೆ ಎಂದು ಸುದೀಪ್ ಅಭಿಪ್ರಾಯ, ಖುಷಿ ಹಂಚಿಕೊಂಡಿದ್ದಾರೆ.
ಕನ್ನಡಿಗ ಪ್ರಭುದೇವ್ ಡೈರೆಕ್ಷನ್ ಮಾಡುತ್ತಿರುವ ಈ ಸಿನಿಮಾದಲ್ಲಿ ಸುದೀಪ್ ಅವರದ್ದು ಸಿಕಂದರ್ ಭಾರಧ್ವಜ್ ಎಂಬ ನೆಗಿಟೀವ್ ರೋಲ್. ಅಂದರೆ ಹೀರೋ ಸಲ್ಮಾನ್ ಎದುರು ಅಬ್ಬರಿಸಿ ಸದ್ದು ಮಾಡುವ ಪಾತ್ರ ನಮ್ಮ ಕಿಚ್ಚನದ್ದು. ಈ ಪಾತ್ರಕ್ಕಾಗಿ ಸುದೀಪ್ ಬಹಳಷ್ಟು ತಯಾರಿಯನ್ನು ಕೂಡ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರ ಭಾಷಾ ಚಿತ್ರರಂಗದಲ್ಲೂ ಬ್ಯುಸಿ ಇದ್ದಾರೆ. ಆದರೆ, ಅವರ ಮೊದಲ ಆಧ್ಯತೆ ಕನ್ನಡಕ್ಕೆ. ಇದೇ ನಮಗೆ-ನಿಮಗೆಲ್ಲಾ ಹೆಮ್ಮೆ. ಸುದೀಪ್ ಇದೇ ಕಾರಣಕ್ಕೆ ಇಷ್ಟ ಆಗುವುದು. ಅಲ್ಲವೇ?

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ...

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...