ದೆಹಲಿಯಲ್ಲಿ ನೆಡೆಯುತ್ತಿರುವ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ 50 ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆದ್ರೆ ಅನಾರೋಗ್ಯದ ಕಾರಣ ಅಮಿತಾಬ್ ಬಚ್ಚನ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ ಸೇರಿದಂತೆ ಅನೇಕ ಪ್ರಶಸ್ತಿ ಪ್ರದಾನವಾಗಲಿದೆ.
ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಬರ್ತಿಲ್ಲವೆಂದು ಅಮಿತಾಬ್ ಬಚ್ಚನ್ ಟ್ವಿಟ್ ಮಾಡಿದ್ದಾರೆ. ವಿಕ್ಕಿ ಕೌಶಲ್, ಅಕ್ಷಯ್ ಕುಮಾರ್, ಸಂಜಯ್ ಲೀಲಾ ಭನ್ಸಾಲಿ ಮತ್ತು ಆಯುಷ್ಮಾನ್ ಖರ್ನಾ ಸೇರಿದಂತೆ ಅನೇಕ ಕಲಾವಿದರು ದೆಹಲಿಯ ವಿಜ್ಞಾನ ಭವನವನ್ನು ತಲುಪಿದ್ದಾರೆ.