ಈ ಬಾರಿಯ ಬಿಗ್ ಬಾಸ್ ಯಾಕೋ ಕಳೆದ ಸೀಸನ್ ಗಳಂತೆ ಸಖತ್ ಸೌಂಡ್ ಮಾಡುತ್ತಿಲ್ಲ. ಭಿನ್ನ ವಿಭಿನ್ನವಾದ ಟಾಸ್ಕ್ ನೀಡಿದರು ಸಹ ಬಿಗ್ ಬಾಸ್ ಸೌಂಡ್ ಮಾಡುವಲ್ಲಿ ಕೊಂಚ ಸಪ್ಪೆ ಎನಿಸುತ್ತದೆ. ಸಾಮಾಜಿಕ ಜಾಲತಾಣದಲ್ಲೂ ಸಹ ಬಿಗ್ಬಾಸ್ ಹವಾ ಕಡಿಮೆ ಇಡು ಕಾರ್ಯಕ್ರಮದ ವಿರುದ್ಧ ಕಾಮೆಂಟ್ ಗಳು ಈ ಬಾರಿ ಹೆಚ್ಚಾಗಿ ಬರುತ್ತಿವೆ. ಹೀಗಿರುವ ಸಂದರ್ಭದಲ್ಲಿ ಬಿಗ್ ಬಾಸ್ ಮನೆಗೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಎಂಟ್ರಿ ಆಗಿದೆ.
ಹೌದು ಬಿಗ್ ಬಾಸ್ ಮನೆಗೆ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಕಾಲಿಟ್ಟಿದ್ದು ಪ್ರೋಮೋ ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ. ಇನ್ನು ಮನೆಗೆ ಕಾಲಿಟ್ಟಿರುವ ಗುರುಕಿರಣ್ ಅವರು ಎಂ ಟಿವಿ ಸುಬ್ಬುಲಕ್ಷ್ಮಿಗೆ ಹಾಡನ್ನು ಹಾಡಿ ಮನೆಯವರನ್ನು ರಂಜಿಸಿದ್ದಾರೆ. ಗುರುಕಿರಣ್ ಅವರ ಎಂಟ್ರಿ ನೋಡಿದ ಬಿಗ್ ಬಾಸ್ ವೀಕ್ಷಕರು ಇವರು ಸ್ಪರ್ಧಿನಾ ಅಥವಾ ಗೆಸ್ಟ್ ಮಾತ್ರನಾ ಎಂದು ಕನ್ಫ್ಯೂಷನ್ ಗೆ ಒಳಗಾಗಿದ್ದಾರೆ. ಇನ್ನು ಮೂಲಗಳ ಪ್ರಕಾರ ಗುರುಕಿರಣ್ ಅವರು ಅತಿಥಿಯಾಗಿ ಬಂದಿದ್ದಾರೆ ಸ್ಪರ್ಧಿ ಅಲ್ಲ ಎಂಬ ಮಾಹಿತಿ ಇದೆ.