ಬಿಗ್ಬಾಸ್ ಸೀಸನ್ 11 ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಂಧನ!

tnit editors
1 Min Read

ಬಿಗ್ಬಾಸ್ ಸೀಸನ್ 11 ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಂಧನ!

ಬಿಗ್ಬಾಸ್ ಸೀಸನ್ 11 ರ ಮಾಜಿ ಸ್ಪರ್ಧಿ, ಸಾಮಾಜಿಕ ಹೋರಾಟಗಾರನಾಗಿಯೂ ಗುರುತಿಸಿಕೊಂಡಿರುವ ಲಾಯರ್ ಜಗದೀಶ್ ಮೇಲೆ ಮತ್ತೆ ನಿನ್ನೆ ಹಲ್ಲೆ ಆಗಿತ್ತು. ಸುಮಾರು 500ಕ್ಕೂ ಹೆಚ್ಚು ಜನ, ಮದ್ಯ ಸೇವಿಸಿ, ಗಾಂಜಾ ಮತ್ತಿನಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಇದೀಗ ಗಲಾಟೆಯಲ್ಲಿ ಅವರ ಗನ್ಮ್ಯಾನ್ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಸಂಬಂಧ ತೇಜಸ್ ಎಂಬುವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಯರ್ ಜಗದೀಶ್ರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಲೈಸೆನ್ಸ್ ಪಡೆದು, ಕರ್ನಾಟಕದಲ್ಲಿ ಫೈರಿಂಗ್ ಮಾಡಿದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ದೂರುದಾರನ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

Share This Article