No menu items!
15.2 C
Munich
Sunday, May 24, 2026

ರಾಜ್ಯದಲ್ಲಿ ನಿಲ್ಲದ ಮೈಕ್ರೋ ಫೈನಾನ್ಸ್ ಕಿರುಕುಳ: ಮತ್ತೊಂದು ಬಲಿ

Must read

ರಾಜ್ಯದಲ್ಲಿ ನಿಲ್ಲದ ಮೈಕ್ರೋ ಫೈನಾನ್ಸ್ ಕಿರುಕುಳ: ಮತ್ತೊಂದು ಬಲಿ

ಮಂಡ್ಯ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಜೀವ ಕಳೆದುಕೊಂಡವರ ಸಂಖ್ಯೆ ಏರುತ್ತಲೇ ಇದೆ. ಸಾಲ ಕೊಟ್ಟವರ ಕಾಟಕ್ಕೆ ಜನರು ನೆಮ್ಮದಿಯಿಂದ ಜೀವನ ಮಾಡದಂತಾಗಿದೆ. ಮಿತಿಮೀರಿದ ಬಡ್ಡಿಗೆ ಕೂಲಿ ನಾಲಿ ಮಾಡಿ ಸಾಲ ಕಟ್ಟಲು ಆಗದೆ ಜನ ಗೋಳಾಡುತ್ತಿದ್ದಾರೆ. ಇಂತಹ ಮೈಕ್ರೋ ಫೈನಾನ್ಸ್ ದಂಧೆಗೆ ಸರ್ಕಾರ ಮೂಗುದಾರ ಹಾಕಬೇಕಿದೆ.
ಇದೀಗ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಾಲಕ್ಕೆ ಮತ್ತೊಂದು ಬಲಿಯಾಗಿದೆ. ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕು ವಳೆಗೆರ ಮೆಣಸ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಸಾಲಗಾರರ ಕಾಟಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒಳಗೆರೆಮೆಣಸ ಗ್ರಾಮದ ಲೋಹಿತ್ @ ನವೀನ್ (35) ಮೃತ ದುರ್ದೈವಿಯಾಗಿದ್ದು, ಈತ ವಿವಿಧ ಮೈಕ್ರೋ ಫೈನಾನ್ಸ್ ಖಾಸಗಿ ವ್ಯಕ್ತಿಗಳಿಂದಲೂ ಸಾಲ ಪಡೆದಿದ್ದನು. ಕಳೆದ ವಾರ ಸಾಲಗಾರರ ಕಾಟಕ್ಕೆ ಬೇಸತ್ತು K.R.ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ಕೂಡ ಸಲ್ಲಿಕೆ ಮಾಡಿದ್ದನು.
ಅಲ್ಲಿಂದಲೂ ರಕ್ಷಣೆ ಸಿಗದಕ್ಕೆ ಮೈಕ್ರೋ ಫೈನಾನ್ಸ್ ಹಾಗೂ ಸಾಲಗಾರರ ಕಾಟಕ್ಕೆ ಬೇಸತ್ತು ಇಂದು ಮುಂಜಾನೆ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

- Advertisement -spot_img

More articles

- Advertisement -spot_img

Latest article