ಬಿಗ್​​​​ ಬ್ರೇಕಿಂಗ್​​ : ಟೀಮ್ ಇಂಡಿಯಾದ ಅಭಿಮಾನಿಗಳಿಗೆ ಇದು ಗುಡ್​​​ ನ್ಯೂಸ್..!

Date:

ಟೀಮ್ ಇಂಡಿಯಾದ ಅಭಿಮಾನಿಗಳು ಈ ನ್ಯೂಸ್ ಅನ್ನು ಮಿಸ್ ಮಾಡ್ದೇ ಓದಲೇ ಬೇಕು. ಯಾಕಂದ್ರೆ ಇದು ವಿರಾಟ್ ಕೊಹ್ಲಿ ಪಡೆಯ ದೊಡ್ಡ ಅಭಿಮಾನಿ ಬಳಗಕ್ಕೆ ಬಹುದೊಡ್ಡ ಗುಡ್ ನ್ಯೂಸ್.
ವಿರಾಟ್​ ಕೊಹ್ಲಿ ಸಾರಥ್ಯ ಭಾರತ ಸದ್ಯ ಇಂಗ್ಲೆಂಡ್​ ನೆಲದಲ್ಲಿ ಸದ್ದು ಮಾಡುತ್ತಿದೆ. ವಿಶ್ವಕಪ್​ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಟೀಮ್ ಇಂಡಿಯಾ. ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಮಣಿಸಿ ಸತತ ಎರಡು ಗೆಲುವಿನೊಂದಿಗೆ ಬೀಗುತ್ತಿದೆ. ಮೂರನೇ ಪಂದ್ಯ ನಾಳೆ ನಡೆಯುತ್ತಿದ್ದು, ನ್ಯೂಜಿಲೆಂಡ್ ಅನ್ನು ವಿರಾಟ್ ಪಡೆ ಎದುರಿಸಲಿದೆ. ಆದರೆ, ಈ ಮೂರನೇ ಪಂದ್ಯಕ್ಕೆ ಶಿಖರ್ ಧವನ್ ಅಲಭ್ಯರಾಗುವ ಸಾಧ್ಯತೆ ಇದೆ.


ಆಸೀಸ್ ವಿರುದ್ಧ ಸಿಡಿಲಬ್ಬರದ ಶತಕ ಗಳಿಸಿದ್ದ ಶಿಖರ್ ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ವಿಶ್ವಕಪ್​ನಿಂದಲೇ ಹೊರಗುಳಿಯುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಬಿಸಿಸಿಐ ಶಿಖರ್ ಧವನ್ ಅವರನ್ನು ಇಂಗ್ಲೆಂಡ್​ನಲ್ಲೇ ಉಳಿಸಿಕೊಳ್ಳಲು ಸದ್ಯಕ್ಕೆ ನಿರ್ಧರಿಸಿದೆ. ಶಿಖರ್ ಧವನ್ ಇಂಗ್ಲೆಂಡ್​ನಲ್ಲೇ ಉಳಿದುಕೊಳ್ಳಲಿದ್ದಾರೆ. ಬಿಸಿಸಿಐನ ಮೆಡಿಕಲ್ ಟೀಮ್ ಅವರನ್ನು ಅಬ್ಸರ್ವೇಷನ್ ಮಾಡ್ತಿದೆ. ಇಂಗ್ಲೆಂಡ್​ ನಲ್ಲೇ ಅವರನ್ನು ಉಳಿಸಿಕೊಳ್ಳಲು ಮಂಡಳಿ ತೀರ್ಮಾನಿಸಿದೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಬಿಸಿಸಿಐ ಟ್ವೀಟ್​ ಟೀಮ್ ಇಂಡಿಯಾದ ಅಭಿಮಾನಿಗಳಿಗೆ ಸ್ವೀಟ್​ ನ್ಯೂಸ್ ಆಗಿದೆ. ಬಿಸಿಸಿಐ ಶಿಖರ್ ಧವನ್ ಅವರನ್ನು ಇಂಗ್ಲೆಂಡ್​ನಲ್ಲೇ ಉಳಿಸಿಕೊಳ್ಳೋ ತೀರ್ಮಾನ ಮಾಡಿರೋದ್ರಿಂದ ಬಹುಶಃ ಅವರು ಚೇತರಿಸಿಕೊಳ್ಳುತ್ತಿದ್ದು ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ. ಧವನ್ ಅವರು ವಿಶ್ವಕಪ್ ಟೂರ್ನಿಯಿಂದಲೇ ಹೊರಬಂದಲ್ಲಿ ರಿಷಭ್ ಪಂತ್ ಅವರಿಗೆ ಇಂಗ್ಲೆಂಡ್​ಗೆ ಹೋಗಲು ಬುಲಾವ್ ನೀಡಲಾಗುತ್ತದೆ ಎನ್ನಲಾಗಿತ್ತು. ಅಷ್ಟೇ ಅಲ್ಲದೆ ಅಂಬಟಿ ರಾಯುಡು, ಶ್ರೇಯಸ್ ಅಯ್ಯರ್ ಅಥವಾ ಕನ್ನಡಿಗ ಮನೀಷ್ ಪಾಂಡೆ ಅವರಿಗೆ ಅಚ್ಚರಿಯ ಕರೆ ಬಂದರೂ ಬರಬಹುದು ಎನ್ನಲಾಗಿತ್ತು. ಇದೀಗ ಧವನ್ ಅಲ್ಲೇ ಉಳಿದುಕೊಳ್ಳೋದ್ರಿಂದ ಸದ್ಯಈ ಯಾವ ಆಟಗಾರರು ಇಂಗ್ಲೆಂಡ್​ಗೆ ಹೋಗ್ತಾ ಇಲ್ಲ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಧವನ್ ಹೊರಗುಳಿದರೆ ಕನ್ನಡಿಗ ಕೆ.ಎಲ್ ರಾಹುಲ್ ಉಪನಾಯಕ ರೋಹಿತ್ ಶರ್ಮಾ ಅವರ ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಮ್ಯಾಚ್​ನಲ್ಲಿ ರಾಹುಲ್ 4ನೇ ಕ್ರಮಾಂಕದಲ್ಲಿ, ಆಸೀಸ್ ವಿರುದ್ಧದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ್ದರು. ರಾಹುಲ್ ಈಗ ಓಪನರ್ ಆಗಿ ಕಣಕ್ಕೆ ಇಳಿದರೆ 4ನೇ ಸ್ಲಾಟ್​ಗೆ ದಿನೇಶ್ ಕಾರ್ತಿಕ್ ಆಯ್ಕೆಯಾಗೋ ಸಾಧ್ಯತೆ ಇದೆ. ಮ್ಯಾನೇಜ್ಮೆಂಟ್ ಆಲೌಂಡರ್ ಅನ್ನು ಎದುರು ನೋಡಿದ್ರೆ ವಿಜಯ್ ಶಂಕರ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯೋದು ಕನ್ಫರ್ಮ್. ಇಲ್ಲವೇ ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್ ಅವರ ಜೊತೆ ರವೀಂದ್ರ ಜಡೇಜಾ ಅವರು ಕೂಡ ಆಲ್​ ರೌಂಡರ್ ಆಗಿ ಸ್ಥಾನ ಪಡೆಯಬಹುದು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...