ಬಿಗ್ ಬಾಸ್ ಟ್ಯಾಲೆಂಟ್ ಮ್ಯಾನೇಜರ್ ಪಿಸ್ತಾ ಧಾಕಡ್ (23) ಇನ್ನಿಲ್ಲ

Date:

ಹಿಂದಿ ಬಿಗ್‌ ಬಾಸ್‌ ರಿಯಾಲಿಟಿ ಶೋನ ಟ್ಯಾಲೆಂಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ಪಿಸ್ತಾ ಧಾಕಡ್‌ ಎಂಬ ಯುವತಿ ಶುಕ್ರವಾರ (ಜ.15) ನಿಧನರಾದರು. ಮುಂಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಕೊನೆಯುಸಿರೆಳೆದರು. ಬಿಗ್‌ ಬಾಸ್‌ ಕಾರ್ಯಕ್ರಮದ ತೆರೆ ಹಿಂದೆ ಕೆಲಸ ಮಾಡುತ್ತಿದ್ದ ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು.

ಪಿಸ್ತಾ ಧಾಕಡ್‌ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ಈ ಹಿಂದಿನ ಸೀಸನ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಾದ ಶೆಹನಾಜ್‌ ಗಿಲ್‌, ಹಿಮಾಂಶಿ ಖುರಾನಾ, ಕಾಮ್ಯಾ ಪಂಜಾಬಿ, ಯುವಿಕಾ ಚೌಧರಿ ಮುಂತಾದವರು ಸೋಶಿಯಲ್‌ ಮೀಡಿಯಾ ಮೂಲಕ ಪಿಸ್ತಾ ಧಾಕಡ್‌ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ‘RIP ಪಿಸ್ತಾ… ಈಗತಾನೇ ವಿಷಯ ಗೊತ್ತಾಯಿತು. ಇನ್ನೂ ಶಾಕ್‌ನಲ್ಲಿದ್ದೇನೆ. ಬದುಕು ಅನಿಶ್ಚಿತ’ ಎಂದು ಹಿಮಾಂಶಿ ಪೋಸ್ಟ್‌ ಮಾಡಿದ್ದಾರೆ.
ಎಷ್ಟು ಖುಷಿಯಾದ, ಚೈತನ್ಯ ಭರಿತ ವ್ಯಕ್ತಿ. ನಿಮ್ಮ ಜೊತೆ ಒಡನಾಡಿದ ಎಲ್ಲರೂ ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಾರೆ’ ಎಂದು ಶೆಹನಾಜ್‌ ಗಿಲ್‌ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ‘ನೀವೇಕೆ ನಮ್ಮನ್ನು ಇಷ್ಟು ಬೇಗ ಬಿಟ್ಟು ಹೊರಟು ಹೋದಿರಿ? ಇದನ್ನು ನಾನು ಬರೆಯುತ್ತಿದ್ದೇನೆ ಅಂತ ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಪೋಸ್ಟ್ ಮಾಡಿದ್ದಾರೆ ಯುವಿಕಾ ಚೌಧರಿ.
ಕಳೆದ ಕೆಲವು ವರ್ಷಗಳಿಂದ ಪಿಸ್ತಾ ಧಾಕಡ್‌ ಅವರು ಬಿಗ್‌ ಬಾಸ್‌ ಕಾರ್ಯಕ್ರಮದ ಟ್ಯಾಲೆಂಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ‘ಖತ್ರೋಂ ಕೆ ಖಿಲಾಡಿ’, ‘ದ ವಾಯ್ಸ್‌’ ಮುಂತಾದ ರಿಯಾಲಿಟಿ ಶೋಗಳಿಗೂ ಅವರು ಕೆಲಸ ಮಾಡಿದ್ದರು. ಎಲ್ಲರ ಜೊತೆಗೂ ಅವರು ಆಪ್ತವಾಗಿ ಬೆರೆಯುತ್ತಿದ್ದರು. ಅವರು ಶುಕ್ರವಾರ (ಜ.15) ಕೆಲಸ ಮುಗಿಸಿ ಮನೆಗೆ ತೆರಳುವಾಗಿ ರಸ್ತೆ ಅಪಘಾತ ಸಂಭವಿಸಿದೆ ಎಂದು ವರದಿ ಆಗಿದೆ.

 

Share post:

Subscribe

spot_imgspot_img

Popular

More like this
Related

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ ಅಂತ್ಯಕ್ರಿಯೆ 

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ...

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ...

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ: ಡಿ.ಕೆ. ಶಿವಕುಮಾರ್

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ:...

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಹ್ಯಾಂಡಸಮ್ ಟೀಚರ್ ಅಂಡ್...