ಬಿಗ್ ಬಾಸ್ ನಿಂದ ರಘು ಬರ್ತಿದ್ದಂತೆ ಲಟ್ಟಣಿಗೆ ಹಿಡಿದ ಪತ್ನಿ!

Date:

ಬಿಗ್ ಬಾಸ್ ಸ್ಪರ್ಧಿಗಳಲ್ಲೊಬ್ಬರಾದ ರಘು, ಪತ್ನಿ ಮಾತು ಕೇಳಿ ದೊಡ್ಮನೆಯಲ್ಲಿ ಸಕತ್ ಎಂಜಾಯ್ ಮಾಡಿದ್ರು, ಈಗ ರಘು ಮನೆಗೆ ಬರುತ್ತಿದ್ದಂತೆ ಅವರ ಪತ್ನಿ ಕೈಯಲ್ಲಿ ಸೌಟು, ಲಟ್ಟಣಿಗೆ ನೋಡಿ ಗಾಬರಿಯಾಗಿದ್ದಾರೆ.

ಹೌದು, ರಘು ಬಿಗ್ ಬಾಸ್ ಮನೆಯೊಳಗಿದ್ದಾಗ ಪತ್ನಿ ವಿದ್ಯಾ, ರಘು ಅವರ ಸೋಶಿಯಲ್ ಮೀಡಿಯಾ ಖಾತೆಯನ್ನು ಮ್ಯಾನೇಜ್ ಮಾಡ್ತಿದ್ರು. ಒಮ್ಮೆ ರಘು ಕ್ಯಾಪ್ಟನ್ ಆಗಿದ್ದಾಗ ವಿದ್ಯಾ ವಾಯ್ಸ್ ನೋಟ್‍ವೊಂದನ್ನು ಕಳಿಸಿದ್ರು. ನಾನು ನೋಡ್ತಿದ್ದೀನಿ, ಮಜಾ ಮಾಡು ಪರ್ವಾಗಿಲ್ಲ ಎಂದು ತಮಾಷೆಗೆ ಗೇಲಿ ಮಾಡಿದ್ರು. ಹೀಗಾಗಿ ಹೆಂಡತಿ ಏನೂ ಹೇಳೊದಿಲ್ಲ ಎಂದು ರಘು ದೊಡ್ಮನೆಯಲ್ಲಿ ಸಕತ್ ಎಂಜಾಯ್ ಮಾಡಿದ್ರು. ಅಲ್ಲದೇ ತಮ್ಮ ಪತ್ನಿ ಹೆಸರನ್ನೂ ಸಹ ಮರೆತಿದ್ದ ರಘು, ವಿದ್ಯಾ ಬದಲು ದಿವ್ಯಾ ಎನ್ನುತ್ತಿದ್ದರು. ಹೀಗಾಗಿ ರಘುಗೆ ಮನೆಗೆ ವಾಪಸ್ ಬಂದೊಡನೆ ಭಯ ಶುರುವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ರಘು ವೈಷ್ಣವಿಯೊಂದಿಗೆ ಹೆಚ್ಚು ಸ್ನೇಹವನ್ನು ಹೊಂದಿದ್ದರು. ಹೀಗಾಗಿ ಉಳಿದ ಸ್ಪರ್ಧಿಗಳು `ಮನೆಗೆ ಹೋದ್ಮೇಲೆ ನಿಂಗೆ ಇದೆ’ ಎಂದು ರಘುಗೆ ರೇಗಿಸುತ್ತಿದ್ದರು. ಸದ್ಯ ಮನೆಯಿಂದ ಹೊರಬಂದ ಮೇಲೆ ರಘು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು ಫೋಟೋ ರಘುಗೆ ಮನೆಗೆ ಬಂದ್ಮೇಲೆ ಏನಾಯ್ತು ಎಂಬ ಪ್ರಶ್ನೆ ಮೂಡಿಸುತ್ತಿದೆ.

ಹೌದು, ರಘು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ರಘು ಪತ್ನಿ ತಮ್ಮ ಕೈಯಲ್ಲಿ ಸೌಟು, ಲಟ್ಟಣಿಗೆ ಹಿಡಿದು ಗಂಭೀರವಾಗಿ ನಿಂತಿದ್ದಾರೆ. ಜೊತೆಗೆ ರಘು ಮುಖದಲ್ಲಿ ಗಾಯವಿದ್ದು, ಪತ್ನಿ ಕೈಯಿಂದ ರಘು ಏಟು ತಿಂದಂತೆ ಅನ್ನಿಸುತ್ತದೆ. ಆದರೆ ರಘು ನಿಜವಾಗ್ಲೂ ಪತ್ನಿ ಕೈಯಿಂದ ಏಟು ತಿಂದ್ರಾ ಅನ್ನೋದಾದ್ರೆ, ಇಲ್ಲ ಅನ್ನುತ್ತೆ ಅವರ ಪೋಸ್ಟ್.

ಹಾಗಿದ್ರೆ ರಘು ತಮ್ಮ ಪೋಸ್ಟ್ ನಲ್ಲಿ ಏನು ಬರೆದಿದ್ದಾರೆ ಅನ್ನೋದಾದ್ರೆ, ಹಾಯ್, ಐ ಆ್ಯಮ್ ಬ್ಯಾಕ್. ಸೇಫ್ ಆಗಿದ್ದೀನಿ. ದಿವ್ಯಾ ಆಟವನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡಿದ್ದಾಳೆ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ರಘು ತಮ್ಮ ಪತ್ನಿಯಿಂದ ಲಟ್ಟಣಿಗೆ ಏಟು ತಿಂದಿಲ್ಲ ಎನ್ನುವುದು ಕನ್ಫರ್ಮ್ ಆಗಿದೆ.

 

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...