ಬಿಗ್ ಬಾಸ್ ಮನೆಗೆ ಧನರಾಜ್ ಫ್ಯಾಮಿಲಿ ಎಂಟ್ರಿ: ಧನರಾಜ್ ಕೆನ್ನೆಗೆ ಹೊಡೆದ ಹೆಂಡತಿ
ಬಿಗ್ ಬಾಸ್ ಕನ್ನಡ ಸೀಸನ್ 11ನೇ ಸೀಸನ್ ಈಗಾಗಲೇ ಮೂರು ತಿಂಗಳು ಪೂರ್ಣಗೊಳಿಸಿದೆ. ಸದ್ಯ ದೊಡ್ಮನೆಯಲ್ಲಿ 9 ಮಂದಿ ಇದ್ದು, ಕನ್ನಡದ ಬಿಗ್ಬಾಸ್ ಸ್ಪರ್ಧಿಗಳು ಸಖತ್ ಖುಷಿಯಲ್ಲಿದ್ದಾರೆ. ಒಂದು ಕಡೆ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮತ್ತೊಂದು ಕಡೆ ಬಿಗ್ಬಾಸ್ ಮನೆಗೆ ಕುಟುಂಬಸ್ಥರ ಆಗಮನವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ಆಗಿರೋದ್ರಿಂದ ಯಾವುದೇ ಟಾಸ್ಕ್ಗಳು ನಡೆಯುತ್ತಿಲ್ಲ.
ಕುಟುಂಬದವರು ಬಂದು ಹೋಗುತ್ತಿದ್ದಾರೆ. ಈಗಾಗಲೇ ಮೋಕ್ಷಿತಾ, ಗೌತಮಿ, ತ್ರಿವಿಕ್ರಂ, ಮಂಜು ಕುಟುಂಬದವರು ಬಂದು ಹೋಗಿದ್ದಾರೆ. ಈಗ ಧನರಾಜ್ ಅವರ ಕೂಡು ಕುಟುಂಬ ಕೂಡ ಬಂದಿದೆ. ಅಷ್ಟೇ ಅಲ್ಲ, ಅವರ ಪತ್ನಿ ಆಗಮಿಸಿ ಎಲ್ಲದಕ್ಕೂ ಐಶು ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶುಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎಂದು ಬಾರಿಸಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ.
ಅದಲ್ಲದೇ ಧನರಾಜ್ ಅವರ ಕೂಡು ಕುಟುಂಬ ಮನೆಗೆ ಎಂಟ್ರಿ ನೀಡಿದೆ. ಬಿಗ್ಬಾಸ್ ಮನೆಗೆ ಬಂದಿರುವ ಸದಸ್ಯರು ಹಲಿ ಕುಣಿತಕ್ಕೆ ಹೆಜ್ಜೆ ಹಾಕಿದೆ. ವಿಶೇಷವಾಗಿ ಧನರಾಜ್ ಅವರ ಮಗುವನ್ನು ಕೂಡ ಬಿಗ್ಬಾಸ್ ಮನೆಗೆ ಬಂದಿದೆ. ಇಂದು ರಾತ್ರಿ ಧನರಾಜ್ ದಂಪತಿಗೆ ಸಂಬಂಧಿಸಿದ ಎಪಿಸೋಡ್ ಪ್ರಸಾರ ಆಗಲಿದೆ.