ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಕಂಪ್ಲೀಟ್ ಮಾಹಿತಿ

Date:

ಕನ್ನಡದ ಬಿಗ್ ಬಾಸ್ ಸೀಸನ್ ಎಂಟಕ್ಕೆ  ಭರ್ಜರಿ ಓಪನಿಂಗ್ ಸಿಕ್ಕಿದೆ. ಕಿಚ್ಚ ಸುದೀಪ್ ಒಬ್ಬೊಬ್ಬರಾಗಿಯೇ ಸ್ಪರ್ಧಿಗಳನ್ನು ಮನೆಯೊಳಕ್ಕೆ ಕಳುಹಿಸಿದ್ದಾರೆ. ಈ ಬಾರಿಯ ಬಿಗ್ ಬಾಸ್ ಮನೆಗೆ  ಯಾರೆಲ್ಲ ಹೋಗಿದ್ದಾರೆ? ಮನೆಯಲ್ಲಿ ಬಿಸಿ ಹೇಗೆ ಏರಲಿದೆ?

ಟಿಕ್ ಟಾಕ್ ಧನುಶ್ರೀ; ಟಿಕ್ ಟಾಕ್ ಮೂಲಕ ಡಿಜಿಟಲ್ ವೇದಿಕೆಯಲ್ಲಿ ಧನುಶ್ರೀ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಜ್ಯೂನಿಯರ್ ನಿತ್ಯಾ ಮೆನನ್ ಎಂದೇ ಕರೆಸಿಕೊಂಡವರು. ಹಾಸನದ ಹುಡುಗಿ ಸೊಶಿಯಲ್ ಮೀಡಿಯಾ ಮೂಲಕ ಸಾಕಷ್ಟು ಅಭಿಮಾನಿಗಳನ್ನು  ಹೊಂದಿದ್ದು ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು.

ಮಾದಕ ನಟಿ ಶುಭಾ ಪೂಂಜಾ;  ಸ್ಯಾಂಡಲ್‌ ವುಡ್ ನಲ್ಲಿ ಹೆಸರು ಮಾಡಿದ ನಟಿ ಶುಭಾ ಪೂಂಜಾ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ. ಶುಭಾ ತಮ್ಮ ಬೋಲ್ಡ್ ಲುಕ್ ನಿಂದಲೇ ಹೆಸರು ಮಾಡಿದವರು.

ಶಂಕರ್ ಅಶ್ವಥ್; ಹಿರಿಯ ನಟ ಶಂಕರ್ ಅಶ್ವಥ್ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಚಾಮಯ್ಯ ಮೇಷ್ಟ್ರು ಹಿರಿಯ ನಟ ಅಶ್ವಥ್ ಅವರ ಪುತ್ರ ಎನ್ನುವುದು ಒಂದು ಕಡೆಯಾದರೆ  ವುಬರ್ ಓಡಿಸಿಕೊಂಡು ಇದ್ದವರು. ನಾನೊಬ್ಬ ಕ್ಯಾಬ್ ಚಾಲಕ ಎನ್ನಲು ಹೆಮ್ಮೆಯಾಗುತ್ತಿದೆ ಎಂದು ಮನೆಯೊಳಕ್ಕೆ ಹೋಗಿದ್ದಾರೆ. ಸುದೀಪ್ ಅವರನ್ನು ಸ್ಮರಿಸಿಕೊಂಡೆ ಮನೆಯೊಳಕ್ಕೆ ಹೋಗಿದ್ದಾರೆ .

ಗಾಯಕ ವಿಶ್ವನಾಥ್;  ‘ಹಾಡು ಕರ್ನಾಟಕ’ ರಿಯಾಲಿಟಿ ಶೋನಲ್ಲಿ ಭಾಗಿಯಾದ ಗಾಯಕ ವಿಶ್ವನಾಥ್ ಹಾವೇರಿ. ಧಾರವಾಡದ ಹುಡುಗ. ವಯಸ್ಸು 19.  ಸಂಗೀತವೇ ನನಗೆ ಎಲ್ಲ ಎನ್ನುವ ವಿಶ್ವನಾಥ್  ಹಾಡು ಗುನಿಗುತ್ತಲೆ ಮನೆಯೊಳಕ್ಕೆ ಹೋಗಿದ್ದಾರೆ.

ಸನ್ನಿಧಿ ವೈಷ್ಣವಿ ಗೌಡ; ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ  ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ವೈಷ್ಣವಿ ಗೌಡ ಮನೆಯೊಳಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.

ಬೈಕ್ ರೇಸರ್ ಅರವಿಂದ್;  ವಿವಿಧ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ವಿಶ್ವ ಮಟ್ಟದ ರೇಸಿಂಗ್ ಚಾಂಪಿಯನ್ ನಲ್ಲಿ  ಹೆಸರು ಮಾಡಿರುವ ಉಡುಪಿಯ ಅರವಿಂದ್ ಈ ಬಾರಿ ಬಿಗ್ ಬಾಸ್ ಮನೆ ಸೇರಿದ್ದಾರೆ.

ನಿಧಿ ಸುಬ್ಬಯ್ಯ; ಸ್ಯಾಂಡಲ್‌ವುಡ್ ನಲ್ಲಿ ಮಿಂಚಿ ನಂತರ ಬಾಲಿವುಡ್ ಗೆ ಹಾರಿದ್ದ ನಟಿ ನಿಧಿ ಸುಬ್ಬಯ್ಯ ಸಹ ಬಿಗ್ ಬಾಸ್ ನಲ್ಲಿ ಇದ್ದಾರೆ.  ಅಡುಗೆ ಮಾಡಲು ಬರುತ್ತದೆ ಎಂದು ಹೇಳಿದ್ದು ಸುದೀಪ್‌ ಗೆ ಖುಷಿ ತಂತು.

ಯೂಟ್ಯೂಬ್ ಸ್ಟಾರ್  ಬ್ರೋ ಗೌಡ;  ಬಾ ಗುರು ಎನ್ನುತ್ತ ಟ್ರೆಂಡ್ ಸೃಷ್ಟಿ ಮಾಡಿದ ಶಮಂತ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದು   ತಮ್ಮೊಳಗೆ ಸ್ವಲ್ಪ ಜಂಭ ಇದೆ ಎಂದು  ಹೇಳಿಕೊಂಡೆ ಹೋಗಿದ್ದಾರೆ

ಗುಂಡಮ್ಮ ಗೀತಾ ಭಟ್; ಧಾರಾವಾಹಿ ಮೂಲಕ ಖ್ಯಾತಿ ಗಳಿಸಿರುವ ಗುಂಡಮ್ಮ ಗೀತಾ ಭಾರತಿ ಭಟ್ ಮನೆಯೊಳಕ್ಕೆ ಕಾಲು ಇಟ್ಟಿದ್ದಾರೆ. ನಾನು ದಪ್ಪ ಇದ್ದಿದ್ದೆ ನನಗೆ ಹೊಸ ಅವಕಾಶ ಸಿಗಲು ಕಾರಣವಾಯಿತು ಎನ್ನುತ್ತಾರೆ

ಮಂಜು ಪಾವಗಡ;  ಮಜಾಭಾರತ ಖ್ಯಾತಿಯ  ಲ್ಯಾಗ್ ಮಂಜಾ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.  ತಳಮಟ್ಟದಿಂದ ಬೆಳೆದು ಬಂದ ಮಂಜು ಅವರಿಗೆ ಹೊಸದೊಂದು ವೇದಿಕೆ ಸಿಕ್ಕಿದೆ.

ಹೆಬ್ಬುಲಿ ಚಿತ್ರದಲ್ಲಿ ಸುದೀಪ್  ತಂಗಿ ಪಾತ್ರ ಮಾಡುವ ಅವಕಾಶ ಕೈಚೆಲ್ಲಿದ್ದ ಸುಂದರಿ ದಿವ್ಯ ಸುರೇಶ್ ಮನೆಯೊಳಕ್ಕೆ ಕಾಲಿಟ್ಟಿದ್ದಾರೆ

ಚಂದ್ರಕಲಾ ಮೋಹನ್; ಪುಟ್ಟಗೌರಿ ಧಾರಾವಾಹಿ ಮೂಲಕ ಹೆಸರಾದ ಅಜ್ಜಮ್ಮ ಈ ಬಾರಿಯ ಬಿಗ್ ಬಾಸ್ ನಲ್ಲಿ ಇದ್ದಾರೆ.

ರಘು ಗೌಡ;  ಸೋಶಿಯಲ್ ಮೀಡಿಯಾ  ಮೂಲಕ ಟ್ರೆಂಡ್ ಸೃಷ್ಟಿ ಮಾಡಿದ ರಘು ಗೌಡ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.

ಪ್ರಶಾಂತ್ ಸಂಬರಗಿ; ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರಗಿ ಈ ಬಾರಿಯ ಬಿಗ್ ಬಾಸ್ ಆಕರ್ಷಣೆ.

ಕಲಾವಿದೆ ದಿವ್ಯಾ; ಕಿರುತೆರೆ  ಕಲಾವಿದೆ ದಿವ್ಯ ಉರುಡುಗ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಎಲ್ಲವನ್ನು ಮನೆಯವರಿಗೆ  ಹೇಳಿಯೇ ಮಾಡುತ್ತೇನೆ ಎಂಬ ಹುಡುಗಿ ಈಕೆ.

ಸಿಸಿಎಲ್ ರಾಜೀವ್; ಕ್ರಿಕೆಟ್ ನಲ್ಲಿ ಸುದೀಪ್  ತಂಡಲ್ಲಿ ಆಡುತ್ತಿದ್ದ ಕಲಾವಿದ, ಕ್ರಿಕೆಟ್ ಪಟು ರಾಜೀವ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ.

ಪ್ರತಿಭಾನ್ವಿತ ಕಲಾವಿದೆ ನಿರ್ಮಲಾ ಚೆನ್ನಪ್ಪ ಕೊನೆಯವರಾಗಿ ಮನೆ ಪ್ರವೇಶ ಮಾಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...