ಬಿಗ್ ಬಾಸ್ ವಿನ್ನರ್ ಗೆ ರೋಹಿತ್ ಶರ್ಮಾ ಸ್ಮರಣೀಯ ಗಿಫ್ಟ್..!

Date:

ಇತ್ತೀಚೆಗೆಷ್ಟೇ ಅಂತ್ಯವಾದ ‘ಬಿಗ್‌ ಬಾಸ್‌ ತೆಲುಗು ಸೀಸನ್‌ 4’ ರಿಯಾಲಿಟಿ ಶೋನಲ್ಲಿ ನಟ ಅಭಿಜಿತ್‌ ಅವರು ವಿನ್ನರ್‌ ಆಗಿ ಹೊರಹೊಮ್ಮಿದ್ದರು. ಅವರಿಗೆ ಈಗ ಕ್ರಿಕೆಟರ್‌ ರೋಹಿತ್‌ ಶರ್ಮಾ ಕಡೆಯಿಂದ ಒಂದು ಜರ್ಸಿ ಉಡುಗೊರೆಯಾಗಿ ಸಿಕ್ಕಿದೆ! ಅದರ ಮೇಲೆ ಸ್ವತಃ ರೋಹಿತ್‌ ಶರ್ಮಾ ಆಟೋಗ್ರಾಫ್‌ ಕೂಡ ಹಾಕಿದ್ದಾರೆ.

ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುತ್ತಿದ್ದ ತೆಲುಗು ಬಿಗ್‌ ಬಾಸ್‌ 4ನೇ ಸೀಸನ್‌ಗೆ ಡಿ.20ರಂದು ತೆರೆಬಿತ್ತು. ಅದರಲ್ಲಿ ಅಭಿಜಿತ್‌ ವಿನ್ನರ್‌ ಆಗಿ ಸ್ಥಾನ ಪಡೆದುಕೊಂಡರು. ‘ಮೆಗಾ ಸ್ಟಾರ್‌’ ಚಿರಂಜೀವಿ ಕೈಯಿಂದ ಟ್ರೋಫಿ ಪಡೆದುಕೊಳ್ಳುವ ಸುವರ್ಣಾವಕಾಶ ಅಭಿಜಿತ್‌ಗೆ ಸಿಕ್ಕಿತು. ಈ ಶೋ ಮುಗಿದ ಬಳಿಕ ಅವರಿಗೆ ಹೆಚ್ಚು ಆಫರ್‌ಗಳು ಬರುತ್ತಿವೆ. ಅವರ ಜನಪ್ರಿಯತೆ ಕೂಡ ಹೆಚ್ಚಿದೆ.

ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಇಂದು(ಜ.15-ಶುಕ್ರವಾರ) ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯನ್ನು ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಟೀಕಿಸಿದ್ದಾರೆ.

ಕೃಷಿ ಕಾಯ್ದೆ ಹಾಗೂ ಪಂಜಾಬ್ ರೈತರ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆರೋಪಿಸಿರುವ ಹರ್‌ಸಿಮ್ರತ್ ಕೌರ್, ಕೃಷಿ ಕಾಯ್ದೆಗಳು ಸಂಸತ್ತಿನ ಅನುಮೋದನೆ ಪಡೆಯುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್ ರೈತರು ಧರಣಿ ನಡೆಸುತ್ತಿರುವಾಗ ರಾಹುಲ್ ಎಲ್ಲಿದ್ದರು, ರಾಜ್ಯಸಭೆಯಲ್ಲಿ ಮಸೂದೆ ಪಾಸಾಗುವ ವೇಳೆ 40 ಕಾಂಗ್ರೆಸ್ ಸದಸ್ಯರು ಗೈರು ಹಾಜರಾಗಿದ್ದೇಕೆ ಎಂದು ಪ್ರಶ್ನಿಸಿರುವ ಹರ್‌ಸಿಮ್ರತ್ ಕೌರ್ ಬಾದಲ್, ರೈತರಿಗಾಗಿ ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಿ ಎಂದು ರಾಹುಲ್ ಗಾಂಧಿ ಅವರನ್ನು ಆಗ್ರಹಿಸಿದ್ದಾರೆ.

ಇದೇ ವೇಳೆ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ಪಂಜಾಬ್ ರೈತರನ್ನು ಖಲಿಸ್ತಾನಿಗಳು ಎಂದು ಕರೆಯುತ್ತಿರುವ ಕುರಿತು ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದರು. ಹರ್‌ಸಿಮ್ರತ್ ಕೌರ್ ಬಾದಲ್ ಈ ಕುರಿತೂ ರಾಹುಲ್ ಗಾಂಧಿ ಅವರನ್ನು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಕಾಟಾಚಾರಕ್ಕೆ ಪತ್ರಿಕಾಗೋಷ್ಠಿ ಮಾಡಿ ಪಂಜಾಬ್ ರೈತರ ಕುರಿತು ಮೊಸಳೆ ಕಣ್ಣೀರು ಸುರಿಸುವ ಮೊದಲು, ನಿಮ್ಮ ಅಜ್ಜಿ(ಇಂದಿರಾ ಗಾಂಧಿ) ಕೂಡ ಪಂಜಾಬಿಗಳ ಕುರಿತು ಇದೇ ಭಾಷೆಯನ್ನು ಬಳಸುತ್ತಿದ್ದರು ಎಂಬುದನ್ನು ನೆನೆಪಸಿಕೊಳ್ಳಿ ಎಂದು ಹರ್‌ಸಿಮ್ರತ್ ಕೌರ್ ಬಾದಲ್ ರಾಹುಲ್ ಗಾಂಧಿ ಅವರನ್ನು ಆಗ್ರಹಿಸಿದ್ದಾರೆ

ನಿಮ್ಮ ತಂದೆ(ರಾಜೀವ್ ಗಾಂಧಿ)ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಂಜಾಬಿಗಳ ಮಾರಣಹೋಮ ನಡೆಯಲು ಏಕೆ ಬಿಟ್ಟರು ಎಂಬುದನ್ನು ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಹರ್‌ಸಿಮ್ರತ್ ಕೌರ್ ಬಾದಲ್ ಆಗ್ರಹಿಸಿದ್ದಾರೆ.

ನಿಮ್ಮ ತಂದೆ(ರಾಜೀವ್ ಗಾಂಧಿ)ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಂಜಾಬಿಗಳ ಮಾರಣಹೋಮ ನಡೆಯಲು ಏಕೆ ಬಿಟ್ಟರು ಎಂಬುದನ್ನು ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಹರ್‌ಸಿಮ್ರತ್ ಕೌರ್ ಬಾದಲ್ ಆಗ್ರಹಿಸಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...