ಬಿಗ್ ಬಾಸ್ -11ರ ಸ್ಪರ್ಧಿಗೆ ದೊಡ್ಡ ತಲೆನೋವಾದ ಟ್ರೋಲ್ ಪೇಜ್ ಗಳು! ಠಾಣೆ ಮೆಟ್ಟಿಲೇರಿದ ರಜತ್ ಪತ್ನಿ
ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಮುಂದಿನ ವಾರ ವೀಕ್ಷಕರ ನೆಚ್ಚಿನ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಅದ್ಧೂರಿ ಫಿನಾಲೆ ಇರಲಿದೆ. ಇದರ ಬೆನ್ನಲ್ಲೇ ಬಿಗ್ ಬಾಸ್ -11ರ ಸ್ಪರ್ಧಿಗೆ ದೊಡ್ಡ ಟ್ರೋಲ್ ಪೇಜ್ ಗಳು ತಲೆನೋವಾಗಿದೆ. ರಜತ್ ಹಾಗೂ ಮಾಜಿ ಗೆಳತಿ ಜೊತೆಗಿನ ಫೋಟೋ ವೈರಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.
ರಜತ್ ಹಾಗೂ ಅವರ ಮಾಜಿ ಗೆಳತಿಯ ಫೋಟೋ ಶೇರ್ ಮಾಡಿ ತೊಂದರೆ ಮಾಡಿದ್ದಾರೆ. ಮಾಜಿ ಗೆಳತಿ- ರಜತ್ ಇರುವ ಫೋಟೋ ಅಪ್ಲೋಡ್ ಮಾಡಿ ಟ್ರೋಲ್ ಮಾಡುತ್ತಿದ್ದರು. ಇದಕ್ಕೆ ರಜತ್ ಅವರ ಪತ್ನಿ ಅಕ್ಷಿತಾ ಅವರು ಫೋಟೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ.
ರಜತ್ ಪತ್ನಿ ಫೋಟೋ ಡಿಲೀಟ್ಗೆ ಮನವಿ ಮಾಡುತ್ತಿದ್ದಂತೆ ಟ್ರೋಲರ್ಸ್ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಅದರಂತೆ ಟ್ರೋಲರ್ ಒಬ್ಬ ಕಳುಹಿಸಿದ ಯುಪಿಐ ಐಡಿಗೆ ರಜತ್ ಪತ್ನಿ, 6,500 ರೂಪಾಯಿಗಳನ್ನು ಕುಳುಹಿಸಿದ್ದಾರೆ. ಈ ಹಣ ಹಾಕಿದ ಮೇಲೆ ಮತ್ತೆ ಬೇರೆ ಟ್ರೋಲರ್ ಪೇಜ್ಗಳಲ್ಲಿ ಫೋಟೋ ಅಪ್ಲೋಡ್ ಮಾಡಲಾಗಿದೆ. ಮತ್ತೆ ಫೋಟೋ ಡಿಲೀಟ್ ಮಾಡಲು ಮನವಿ ಮಾಡಿದಾಗ ಟ್ರೋಲರ್ಸ್ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ.
ಇದರಿಂದ ಬೇಸತ್ತ ರಜತ್ ಪತ್ನಿ ಕೊನೆಗೆ 10ಕ್ಕೂ ಹೆಚ್ಚು ಟ್ರೋಲ್ ಪೇಜ್ಗಳ ವಿರುದ್ಧ ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ. ಠಾಣೆಯಲ್ಲಿ ಕೇಸ್ ದಾಖಲು ಆಗುತ್ತಿದ್ದಂತೆ ಎಲ್ಲ ಪೇಜ್ಗಳಲ್ಲಿ ಫೋಟೋ ಡಿಲೀಟ್ ಮಾಡಲಾಗಿದೆ. ಅಲ್ಲದೇ ಅಕೌಂಟ್ ಅನ್ನು ಡಿಆ್ಯಕ್ಟಿವ್ ಮಾಡಿದ್ದಾರೆ.