ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಸಾಲ ಹೊರಿಸಿ ಹೋದವರು: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಸಾಲ ಹೊರಿಸಿ ಹೋದವರು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಸಾಲ ಹೊರಿಸಿ ಹೋದವರು. ಎಲ್ಲಾ ಕಡೆ ಸಾವಿರಾರು ಕೋಟಿ ಸಾಲ ಇಟ್ಟು ಹೋಗಿದ್ದಾರೆ. ಅಭಿವೃದ್ಧಿಗೆ ಮಾಡುವ ಖರ್ಚಿನ ಹಣ ಸೇರಿ ಎಲ್ಲಾ ಕಡೆ ಸಾಲ ಇಟ್ಟು ಹೋಗಿದ್ದಾರೆ. ಈಗ ನಮ್ಮ ಮೇಲೆ ಹೇಳುತ್ತಾರೆ.
ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನೂ ಮೂರುವರೆ ವರ್ಷ ಎಲ್ಲಾ ಗ್ಯಾರಂಟಿ ಇದ್ದೇ ಇರುತ್ತದೆ. ಮುಂದೆ ಮತ್ತೆ ಚುನಾವಣೆ ಬರುತ್ತದೆ. ಆಗಲೂ ನಾವೇ ಗೆಲ್ಲುತ್ತೇವೆ. ಆಗಲೂ ಈ ಗ್ಯಾರಂಟಿ ಮುಂದುವರೆಯುತ್ತದೆ. ಬಿಜೆಪಿ ಬಡವರ ವಿರೋಧಿಗಳು. ಅವರು ಕೊಡೋದೂ ಇಲ್ಲ, ಕೊಟ್ಟವರನ್ನ ಸಹಿಸೋದು ಇಲ್ಲ ಎಂದು ಕಿಡಿಕಾರಿದ್ದಾರೆ.