ಬಿಜೆಪಿಯವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ: ಸಚಿವ ಡಾ. ಜಿ ಪರಮೇಶ್ವರ್ ಗರಂ
ಬೆಂಗಳೂರು: ಬಿಜೆಪಿಯವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ಘಟನೆಯನ್ನು ಯಾರಾದರೂ ಸಮರ್ಥನೆ ಮಾಡುತ್ತೇವಾ? ಕಾರಣಕರ್ತರನ್ನು ಬಂಧನ ಮಾಡುತ್ತೇನೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಗರಂ ಆದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಗಮಂಗಲ ಗಲಭೆ ವಿಚಾರವಾಗಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿಗೆ ಮನವಿ ಮಾಡಿದ್ದೆ. ಆದರೂ ಅವರು ರಾಜಕೀಯವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ಇನ್ನೂ ಗೃಹ ಸಚಿವರು ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ಘಟನೆಯನ್ನು ಯಾರಾದರೂ ಸಮರ್ಥನೆ ಮಾಡುತ್ತೇವಾ? ಕಾರಣಕರ್ತರನ್ನು ಬಂಧನ ಮಾಡುತ್ತೇನೆ. ಹೇಳಿಕೆಗಳನ್ನು ಬಿಜೆಪಿಗರು ಕೊಡುವುದು ಸಹಜ. ನನಗೂ ಮಾತನಾಡಲು ಬರುತ್ತೆ. ನನ್ನ ಮಾತನ್ನು ಟ್ವಿಸ್ಟ್ ಮಾಡಲಾಗಿದೆ ಎಂದರು