ಬಿಜೆಪಿಯೊಳಗೆ ಎಷ್ಟು ಬಾಗಿಲು ನಾಯಕರು ಹೇಳಲಿ: ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಕಾಂಗ್ರೆಸ್ ಬಗ್ಗೆ ಮಾತಾಡ್ತಿದ್ದ ಬಿಜೆಪಿ ನಾಯಕರು ಈಗ ತಮ್ಮ ಪಕ್ಷಕ್ಕೆ ಎಷ್ಟು ಬಾಗಿಲು ಅಂತ ಹೇಳಬೇಕು ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಆಂತರಿಕ ಕಿತ್ತಾಟದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರು ಕಾಂಗ್ರೆಸ್ ಬಗ್ಗೆ ಮಾತಾಡಿದ್ರು.
ಕಾಂಗ್ರೆಸ್ ಒಡೆದ ಮನೆ ಅಂತ ಹೇಳಿದ್ರು. ಕಾಂಗ್ರೆಸ್ದು ಮೂರು ಬಾಗಿಲು, ನಾಲ್ಕು ಬಾಗಿಲು ಅಂತ ಹೇಳ್ತಿದ್ರು. ಈಗ ಬಿಜೆಪಿ ಅವರದ್ದು ಎಷ್ಟು ಬಾಗಿಲು ಅಂತ ಹೇಳಬೇಕು. ಬಿಜೆಪಿಯವರು ಬಹಿರಂಗವಾಗಿ ಕಿತ್ತಾಟ ಮಾಡ್ತಿದ್ದಾರೆ. ಈಗ ಅವರೇ ಎಷ್ಟು ಬಾಗಿಲು ಅಂತ ಹೇಳಲಿ ಅಂತ ಲೇವಡಿ ಮಾಡಿದ್ರು.
ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಮಾಡಬೇಕು ಎಂಬ ಬಿಜೆಪಿಯಲ್ಲಿ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನನಗೇನು ಗೊತ್ತಿಲ್ಲ. ಅವರ ಪಕ್ಷದ ಬಗ್ಗೆ ನಾನು ಚರ್ಚೆ ಮಾಡಲ್ಲ. ಅದು ಅವರ ಪಕ್ಷದ ವಿಚಾರ. ಇಷ್ಟು ದಿನ ನಮಗೆ ಹೇಳ್ತಿದ್ದರು ಗಲಾಟೆ, ಕಿತ್ತಾಟ ಅಂತ ಈಗ ಬಿಜೆಪಿ ಅವರು ಏನ್ ಹೇಳ್ತಾರೆ ಅಂತ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.