ಬಿಜೆಪಿ ಅವರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾತನಾಡಿದ ಅವರು, ರಾಜಕೀಯ ಪ್ರೇರಿತ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಬೊಮ್ಮಾಯಿ ರಾಜ್ಯದ ಘನತೆಯನ್ನು ಮಣ್ಣುಪಾಲು ಮಾಡಿದೆ. ಹಿಂದೆ ಬಂದ ಸಿಎಂಗಳು ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆಕೊಂಡೊಯ್ಯುವ ಪ್ರಯತ್ನ ಮಾಡಿದ್ದರು. ಆದರೆ ಇಂದು ಸಿಎಂ ಕರ್ನಾಟಕವನ್ನು ಉತ್ತರ ಪ್ರದೇಶ ಮಾದರಿ ಮಾಡುತ್ತೇವೆ ಅಂತಾರೆ. ಅಭಿವೃದ್ಧಿಯಲ್ಲಿ ಹಿಂದಿರುವ ಯುಪಿ ನಮಗೆ ಹೇಗೆ ಮಾದರಿ ಆಗಲು ಸಾಧ್ಯ? ಅವಧಿ ಮುಗಿದ ಆರು ತಿಂಗಳಲ್ಲಿ ಚುನಾವಣೆ ಮಾಡಬೇಕಿತ್ತು. ಆದರೆ ಎರಡು ವರ್ಷ ತಡ ಮಾಡಿದ್ದಾರೆ. ಕೊಲೆಗಿಂತ ರಸ್ತೆ ಗುಂಡಿಗೆ ಬಿದ್ದು ಜನ ಸಾಯುತ್ತಿದ್ದಾರೆ. ನಗರದ ಅಭಿವೃದ್ಧಿ ಆಗಿಲ್ಲ. ಶೇ.40 ರಷ್ಟು ಕಮಿಷನ್ಗೆ ಕಾರ್ಪೊರೇಟರ್ಗಳಿಗೆ ಸಿಗಬಾರದು, ಎಲ್ಲವೂ ತಮಗೆ ಬರಬೇಕು, ಕೇಶವಕೃಪಾಗೆ ಸಿಗಬೇಕೆಂದು ಬೊಮ್ಮಾಯಿ ಬಯಸುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಾರೆ. ಮುಂದಿನ ಸರ್ಕಾರ ನಮ್ಮದೇ. ದಾವಣಗೆರೆ, ಬೆಂಗಳೂರಿನ ಕಾರ್ಯಕ್ರಮದಿಂದ ಬಿಜೆಪಿ ಹೆದರಿದೆ. ಪರಿಸ್ಥಿತಿ ಬದಲಾಗಬೇಕಿದೆ ಎಂದು ಕಿಡಿಕಾರಿದರು.