ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಹೈಕಮಾಂಡ್‌ಗೆ ಇಷ್ಟವಿರಲಿಲ್ಲ. ಯಡಿಯೂರಪ್ಪ ಅವರೇ ಗೋಗರೆದು ಸಿಎಂ ಆಗಿದ್ದಾರೆ. ಅವರನ್ನು ಮೂಲೆಗುಂಪು ಮಾಡಲು ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಿದ್ದಾರೆ. ಹೀಗಾಗಿ, ಈ ಸರ್ಕಾರ ಎಷ್ಟು ದಿನ ಇರುತ್ತದೆಯೋ ಹೇಳಕ್ಕಾಗಲ್ಲ. ಸರ್ಕಾರ ಬೀಳುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ .
ಹಾಗೆ ಬಿಜೆಪಿಯಲ್ಲಿ ಅತೃಪ್ತರ ಗುಂಪೊಂದು ಸೃಷ್ಟಿಯಾಗಿದ್ದು ಸಚಿವ ಸ್ಥಾನ ಪಡೆದ ಕೆಲವರು ನಮಗೆ ಸರಿಯಾದ ಖಾತೆ ಸಿಗಲಿಲ್ಲ ಎಂಬ ಅಸಮಾಧಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ .