ಬಿಜೆಪಿ ಶಾಸಕರು ಉಳಿದುಕೊಂಡಿದ್ದ ರೆಸಾರ್ಟ್ ರೂಂ ಬಾಡಿಗೆ ಒಂದು ದಿನಕ್ಕೆ ಎಷ್ಟು ಗೊತ್ತಾ..? ಒಟ್ಟು ಬಿಲ್ ಆಗಿದೆಷ್ಟು..??
ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಸರ್ಕಾರವನ್ನ ಪತನ ಮಾಡಲು ಮುಂದಾದ ಬಿಜೆಪಿ ಪಕ್ಷ, ತನ್ನ ಶಾಸಕರೊಂದಿಗೆ ಐಷಾರಾಮಿ ರೆಸಾರ್ಟ್ ಆದ ಗುರುಗ್ರಾಮದ ಐಟಿಸಿ ಗ್ರಾಂಡ್ ಭಾರತ್, ಲೆಮೆನ್ ಟ್ರೀ, ಮುಂಬೈನ ರೆಸಾರ್ಟ್ ಗಳಲ್ಲಿ ಬಿಜೆಪಿ ಶಾಸಕರು ಆರಾಮವಾಗಿ ಕಾಲ ಕಳೆದಿದ್ರು.. 99 ಶಾಸಕರು ಈ ರೆಸಾರ್ಟ್ ಗಳಲ್ಲಿ ಉಳಿದುಕೊಂಡಿದ್ರು..
ಇಲ್ಲಿನ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್ ಸೆವೆನ್ ಸ್ಟಾರ್ ರೆಸಾರ್ಟ್ ಆಗಿದ್ದು, ಒಂದು ದಿನದ ರೂಂ ನ ಬಾಡಿಗೆ ಕನಿಷ್ಠ 25 ಸಾವಿರ ಎನ್ನಲಾಗ್ತಿದೆ.. ಇಲ್ಲಿನ ವಿಲ್ಲಾಗಳ ಬಾಡಿಗೆ ದಿನಕ್ಕೆ 3 ಲಕ್ಷವಂತೆ.. ಇನ್ನು ನಮ್ಮ ರಾಜ್ಯ ಶಾಸಕರು ಉಳಿದುಕೊಂಡಿದ್ದ ರೂಂಗಳ ಬಾಡಿಗೆ ದಿನಕ್ಕೆ 80 ಸಾವಿರವಂತೆ.. ಒಟ್ಟು 60 ರೂಗಳನ್ನ ಬುಕ್ ಮಾಡಲಾಗಿದ್ದು, ಇದಕ್ಕಾಗಿ ಬರೊಬ್ಬರಿ 1.92 ಕೋಟಿ ಹಣವನ್ನ ಖರ್ಚು ಮಾಡಲಾಗಿದೆ..
ಇನ್ನು ಐದನೇ ದಿನಕ್ಕೆ 30 ರೂಮ್ ಗಳನ್ನ ಬುಕ್ ಮಾಡಲಾಗಿದ್ದು, ಒಟ್ಟಾರೆ ಈ ಶಾಸಕರ ರೂಂಗಳ ಬಾಡಿಗೆ 2.16 ಕೋಟಿ ರೂಪಾಯಿಗಳಾಗಿವೆ.. ಲೆಮನ್ ಟ್ರೀ ರೆಸಾರ್ಟ್ ರೂಂಗಳನ್ನ ಬುಕ್ ಸಹ ಮಾಡಲಾಗಿತ್ತು ಇದಕ್ಕಾಗಿ ಒಟ್ಟು 3.75 ಲಕ್ಷವನ್ನ ಬಿಲ್ ಕಟ್ಟಲಾಗಿದೆಯಂತೆ. ಇನ್ನುಳಿದಂತೆ ಈ ಎಲ್ಲರಿಗು ನೀಡಲಾದ ಊಟ ಸೇರಿದಂತೆ ಹಲವು ಸೌಲಭ್ಯಗಳ ಬಿಲ್ ಮತ್ತಷ್ಟು ಇದರಲ್ಲಿ ಸೇರಿಸಿಲ್ಲ ಅದನ್ನು ಸೇರಿ ಲೆಕ್ಕ ಹಾಕಿದ್ರೆ ಖರ್ಚಾದ ಹಣದ ಮೊತ್ತ ಮತ್ತಷ್ಟು ಹೆಚ್ಚಾಗಲಿದೆ..