ಬೆಳಗಾವಿ: ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ. ಬಿಜೆಪಿ ಎಲ್ಲಾ ಸಂಸದರು ನರಸತ್ತವರು, ಇವರೆಲ್ಲಾ ಶಿಖಂಡಿಗಳು ಎಂದು ಕಳಸಾ ಬಂಡೂರಿ ಹೋರಾಟಗಾರ ವಿಜಯ್ ಕುಲಕರ್ಣಿ ಹೇಳಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಕುಲಕರ್ಣಿ, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ರೈತರನ್ನು ಬಲಿ ಕೊಡುತ್ತಲೇ ಬಂದಿವೆ. ನಾವು ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಮಹದಾಯಿ ವಿವಾದ ಬಗೆಹರಿಯುತ್ತೆ ಅಂತ ಆಶಾಭಾವನೆಯನ್ನು ಇಟ್ಟಿಕೊಂಡಿದ್ದೆವು. ಆದರೆ ಇನ್ನು ಈ ವಿವಾದಕ್ಕೆ ಪರಿಹಾರ ಸಿಕ್ಕಿಲ್ಲ. ಆದರೂ ನಾವೆಲ್ಲಾ ಇಂದಿನವರೆಗೂ ಶಾಂತಿಯಿಂದ ಹೋರಾಟ ನಡೆಸಿದ್ದೇವೆ. ಆದರೆ ಇನ್ನು ಮುಂದೆ ನಮ್ಮ ಹೋರಾಟ ಉಗ್ರ ರೂಪ ತಾಳಲಿದೆ. ಅದಕ್ಕಾಗಿ ನಾವು ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.ಇನ್ನು ಪ್ರಹ್ಲಾದ ಜೋಶಿಯವರು ಸಂಸದೀಯ ಸಚಿವರಾಗಿದ್ದರೂ ಯಾವದೇ ಪ್ರಯೋಜನವಿಲ್ಲ. ಇವರು ಕುಡಿಯೋದು ಮಲಪ್ರಭಾ ನೀರನ್ನೇ ಆದರೂ ಕಾಮಗಾರಿ ಆಗಬಾರದೆಂಬ ಉದ್ದೇಶ ಅವರದ್ದಾಗಿದೆ. ಅಷ್ಟೇ ಅಲ್ಲ ನೀರು ಕೊಡುವವರೆಗೆ ರೈತರು ತಾವು ಪಡೆದ ಸಾಲವನ್ನು ಕೊಡುವುದಿಲ್ಲ. ನಾನು ಕಳಸಾ ಬಂಡೂರಿ ನಾಲಾದ ಮೂರು ಬೊಗಸೆ ನೀರು ಕುಡಿದು ಸಾಯಬೇಕು ಅಂದುಕೊಂಡಿದ್ದೆ ಈಗ ಈ ಎಲ್ಲ ಸಂಸದರ ಬಾಯಿಗೆ ಮೂರು ಹಿಡಿ ಮಣ್ಣು ಹಾಕಿ ಸಾಯುತ್ತೇನೆ ಎಂದಿದ್ದಾರೆ.
“ಬಿಜೆಪಿ ಸಂಸದರೆಲ್ಲರೂ ನರಸತ್ತವರು, ಶಿಖಂಡಿಗಳು” ಎಂದ ಕಳಸಾ ಬಂಡೂರಿ ಹೋರಾಟಗಾರ
Date: