ಮುಂದಿನ ಬಾರಿ ಮೋದಿ ಹೆಸರು ಹೇಳಿಕೊಂಡು ಬಂದರೆ ಬಾಯಲ್ಲಿ ಬೂಟು ಹಾಕುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಣ್ಣೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿಯವರ ಹಿಂದುತ್ವ ನೋಡಿ ನಿಮಗೆ ವೋಟು ಹಾಕಿದ್ದೇವೆ. 5 ವರ್ಷಗಳ ಕಾಲ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ. ಮುಂದಿನ ಸಲ ಮೋದಿ ಮೋದಿ ಎಂದು ಬಂದರೆ ಬಾಯಿಗೆ ಬೂಟು ಹಾಕುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.