ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ರಾಮ್ ಕಾಂಬಿನೇಷನ್ ನ ಎರಡನೇ ಚಿತ್ರ ಯುವರತ್ನ ಕಳೆದ ವಾರವಷ್ಟೇ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿ 1 ವಾರ ಕಳೆಯುವ ಅಷ್ಟರಲ್ಲೇ ಇದೀಗ ಪುನೀತ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಬಂದಿದೆ.
ಹೌದು ಯುವರತ್ನ ಚಿತ್ರ ನಾಳೆಯೇ ( ಏಪ್ರಿಲ್ 9 ) ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಹೌದು ಚಿತ್ರ ಬಿಡುಗಡೆಗೂ ಮುನ್ನವೇ ಡಿಜಿಟಲ್ ರೈಟ್ಸ್ ಅನ್ನು ಅಮೆಜಾನ್ ಪ್ರೈಮ್ ಖರೀದಿಸಿತ್ತು. ಮೇ ತಿಂಗಳಿನಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಯುವರತ್ನ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡಿತ್ತು ಆದರೆ ಇದೀಗ ಕೊರೋನಾವೈರಸ್ ಎರಡನೇ ಅಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಳೆಯೇ ಅಮೆಜಾನ್ ಪ್ರೈಮ್ ನಲ್ಲಿ ಯುವರತ್ನ ಚಿತ್ರ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೆ.
ಒಂದು ವೇಳೆ ಹೀಗೇನಾದರೂ ಆದರೆ ಅತಿವೇಗವಾಗಿ ಅಮೆಜಾನ್ ಪ್ರೈಮ್ ಗೆ ಬಂದ ಕನ್ನಡದ ಸ್ಟಾರ್ ಸಿನಿಮಾ ಯುವರತ್ನ ಆಗಲಿದೆ.