ಬಿಪಿನ್ ರಾವತ್ ಬಗ್ಗೆ ಬೇಕಾಬಿಟ್ಟಿ ಪೋಸ್ಟ್ ಹಾಕಿದ್ರೆ ಇದೇ ಗತಿ!

Date:

ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಇತ್ತೀಚೆಗೆ ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದರು. ಒಂದೆಡೆ ಇಡೀ ದೇಶವೇ ಬಿಪಿನ್ ರಾವತ್ ಸಾವಿಗೆ ಕಂಬನಿ ಮಿಡಿಯುತ್ತಿದೆ. ಇನ್ನೊಂದೆಡೆ ರಾಜಸ್ಥಾನದಲ್ಲಿ ಕಿಡಿಗೇಡಿಯೋರ್ವ ಬಿಪಿನ್ ರಾವತ್ ಸಾವು ಸಂಭ್ರಮಿಸಿ ಪೋಸ್ಟ್ವೊಂದು ಹಾಕಿ ಜೈಲು ಸೇರಿದ್ದಾನೆ.

 

ಜವ್ವಾದ್ ಖಾನ್ ಎಂಬ ಕಿಡಿಗೇಡಿ ಬಿಪಿನ್ ರಾವತ್ ಫೋಟೋ ಪೋಸ್ಟ್ ಮಾಡಿ, ನರಕಕ್ಕೆ ಹೋಗುವ ಮೊದಲೇ ಈತನ ದೇಹ ಸುಟ್ಟು ಹೋಯ್ತು ಎಂದು ಕೆಟ್ಟದಾಗಿ ಬರೆದುಕೊಂಡಿದ್ದಾನೆ. ಈ ಸಂಬಂಧ ಈಗ ರಾಜಸ್ತಾನ ಪೊಲೀಸರು ಕಿಡಿಗೇಡಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

 

ಇನ್ನು, ಜವ್ವದ್ ಖಾನ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಇಸ್ಲಾಮಿಕ್ ಫಂಡಮೆಂಟಲಿಸ್ಟ್ ಎಂದು ಗುರುತಿಸಿಕೊಂಡಿದ್ದಾನೆ. ಅಲ್ಲದೇ ಉಗ್ರ ತಾಲಿಬಾನ್ ಸಂಘದ ಪರ ಹಲವು ವಿವಾದಾತ್ಮಕ ಪೋಸ್ಟ್ ಹಾಕಿದ್ದಾನೆ. ಈಗ ಪೊಲೀಸರು ಈತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ದೂರದಲ್ಲಿ ಎಲ್ಲೋ ಅಲ್ಲ.. ಕರ್ನಾಟಕದಲ್ಲೂ ಇಂದು ಹಲವಾರು ಕಿಡಿಗೇಡಿಗಳು ಸೋಶಿಯಲ್​​ ಮೀಡಿಯಾಗಳಲ್ಲಿ ಜನರಲ್ ಬಿಪಿನ್ ರಾವತ್ ಅವರ ಬಗ್ಗೆ ವಿಷವನ್ನು ಉಗುಳಿದ್ದಾರೆ. ಫೇಸ್​​ಬುಕ್​, ಟ್ವಿಟರ್​ನಲ್ಲಿ ಅಂಥ ಕಿಡಿಗೇಡಿಗಳು ಹಲವರಿದ್ದಾರೆ. ಕೇವಲ ಕಮೆಂಟ್​ ಹಾಕೋದು ಮಾತ್ರವಲ್ಲ, ಇನ್ನೂ ಹಲವರು ನಗುವಿನ ಎಮೋಜಿ ಹಾಕಿರೋದು ಕೂಡ ಕಂಡು ಬಂದಿದೆ. ಈ ಬಗ್ಗೆ ರಾಜ್ಯದ ಪೊಲೀಸರು ಏನಾದ್ರೂ ಕ್ರಮ ತೆಗೆದುಕೊಳ್ಳುತ್ತಾರಾ? ಅಥವಾ ಸುಮ್ಮನಾಗ್ತಾರಾ? ಅಂತ ಹಲವರು ಪ್ರಶ್ನಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....