ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಗಿಣಿ ಚಿಕನ್ ಬಿರಿಯಾನಿ ಮತ್ತು ಕಬಾಬ್ ತಯಾರಿಸಿ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದು ಮನೆಗೆ ಮರಳಿದ ನಂತರ ನಟಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ರಾಗಿಣಿ ಮನೆಯಲ್ಲೇ ಅಪ್ಪ-ಅಮ್ಮನೊಂದಿಗೆ ಪ್ರೇಮಿಗಳ ದಿನ ಆಚರಿಸಿದ್ದಾರೆ. ಅಪ್ಪ-ಅಮ್ಮನಿಗೆ ರುಚಿಯಾದ ಅಡುಗೆ ಮಾಡಿಕೊಟ್ಟು, ಅಮ್ಮನ ಕೈಯಿಂದ ಕೇಕ್ ಕತ್ತರಿಸಿದ್ದಾರೆ. ಈ ಫೋಟೋವನ್ನು ಹಂಚಿಕೊಂಡು ನನ್ನ ಯಾವ ಜನ್ನದ ಪುಣ್ಯವೋ ನಿಮ್ಮನ್ನು ನನ್ನ ಪೋಷಕರಾಗಿ ಪಡೆದಿದ್ದೆನೆ. ಅಡುಗೆ ಮಾಡಲು ಖುಷಿಯಾಗುತ್ತದೆ. ಈ ದಿನ ನನಗೆ ತುಂಬಾನೆ ವಿಶೇಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ಅವರಿಗೆ ಇಷ್ಟವಾದ ಬೃಹತ್ ಗಾತ್ರದ ಗೊಂಬೆಯನ್ನು ತಬ್ಬಿಕೊಂಡು ನಿಮ್ಮ ಹಾದಿ ನಿಮಗೆ ತಿಳಿದಿದ್ದರೆ ಯಾರು ತಡೆಯಲು ಸಾಧ್ಯವಿಲ್ಲ. ಗೊಂಬೆಗಳನ್ನು ನೋಡುತ್ತಿದ್ದಂತೆ ನನ್ನ ವಯಸ್ಸು ಚಿಕ್ಕದಾಗುತ್ತದೆ. ಈ ಸೈಜ್ ಗೊಂಬೆ ಸಿಗುವುದು ತುಂಬಾನೇ ಕಡಿಮೆ ಎಂದು ಬರೆದುಕೊಂಡು ಫೋಟೋವನ್ನು ಶೇರ್ ಮಾಡಿದ್ದಾರೆ.
ಜೈಲಿನಿಂದ ಹೊರ ಬಂದ ಬಳಿ ರಾಗಿಣಿ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕವಾಗಿ ಹೆಚ್ಚು ಬೆರೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಲೈವ್ ವೀಡಿಯೋ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು, ಗಳಗಳನೆ ಅತ್ತಿದ್ದರು. ಅನೇಕರು ಕೆಟ್ಟ ಕಮೆಂಟ್‍ಗಳನ್ನು ಸಹ ಮಾಡಿದ್ದು, ಅವುಗಳನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ ಸಮಾಧಾನದಿಂದಲೇ ಉತ್ತರಿಸಿದ್ದರು.
ಸದ್ಯ ಚಿಕನ್ ಬಿರಿಯಾನಿ ಹಾಗೂ ಕಬಾಬ್ ತಯಾರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಲಾಕ್‍ಡೌನ್ ವೇಳೆ ರಾಗಿಗೆ ಅಡುಗೆ ಮಾಡುವುದನ್ನು ಕಲಿತುಕೊಂಡಿದ್ದರು. ವಿವಿಧ ಬಗೆಯ ನಾನ್‍ವೆಜ್ ಅಡುಗೆಯನ್ನು ಮಾಡುತ್ತಾರೆ.