ಬಿ.ಎಸ್.ಯಡಿಯೂರಪ್ಪ ಆಗ್ತಾರಂತೆ ಮುಂದಿನ ಮುಖ್ಯಮಂತ್ರಿ !?

Date:

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಬಂದಿದೆ. ರಾಜ್ಯದಲ್ಲಿಯೂ ಬಿಜೆಪಿ ಸರಕಾರ ಬರಲಿದ್ದು, ಯಡಿಯೂರಪ್ಪ ಮುಂದಿನ ಸಿಎಂ ಆಗಲಿದ್ದಾರೆ. ಹೀಗಂತ ಸಂಸದರೊಬ್ಬರು ಹೇಳಿದ್ದಾರೆ.
ಈಗ ಬಿಜೆಪಿ ಕಾರ್ಯಕರ್ತರು ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಲು ಎಸಿ ಸ್ಲೀಪರ್ ಕೋಚ್, ಬಸ್ ಗಳಿವೆ. ಆದರೆ ರೈಲ್ವೆ ಸ್ಟೇಷನ್ ನಲ್ಲಿ ಬೋಗಿಗಳನ್ಮು ಕ್ಲೀನ್ ಮಾಡಲು ಬಳಸುವ ನೀರಿನಲ್ಲಿ ಸ್ನಾನ ಮಾಡಿ ಪಕ್ಷ ಕಟ್ಟಿದವರು ಅನಂತಕುಮಾರ್ ಮತ್ತು ಯಡಿಯೂರಪ್ಪನವರು. ಹೀಗಂತ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ನಮ್ಮೆಲ್ಲರ ಆಶಯಗಳನ್ನು ಈಡೇರಿಸುವ ಹೊಸ ಸರ್ಕಾರ ಬರಬೇಕಿದೆ. ಆ ಹೊಸ ಸರ್ಕಾರದ ಮುಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗುತ್ತಾರೆ ಎಂದರು. ಲೋಕಸಭೆಯಲ್ಲೂ ಈ ಮಾತನ್ನು ಹೇಳಿದ್ದೇನೆ.ಈಗಲೂ ಅದನ್ನೆ ಪುನರುಚ್ಛರಿಸುತ್ತಿದ್ದೇನೆ ಎಂದರು.

ಇನ್ನು, ಸೋಮಣ್ಣನವರಿಗೆ ಏನು ‌ಮಹಾ ವಯಸ್ಸಾಗಿದೆ? ಈಗಲೂ ಅವರಿಗೆ ಇನ್ನೊಂದು ಮದುವೆ ಮಾಡಬಹುದು ಎಂದು ಕಾಲೆಳೆದರು ಬಿ.ಎಸ್.ಯಡಿಯೂರಪ್ಪ. ಈ ವಯಸ್ಸಲ್ಲೂ ಪಾದರಸದಂತೆ ಚಟುವಟಿಕೆಯಿಂದ ಇರೋರು ಸೋಮಣ್ಣನವರು ಎಂದು ತೇಜಸ್ವಿ ಸೂರ್ಯ ಹೇಳಿದ ಮಾತಿಗೆ ಹಾಸ್ಯ ಚಟಾಕಿ ಹಾರಿಸಿದರು ಯಡಿಯೂರಪ್ಪ.

Share post:

Subscribe

spot_imgspot_img

Popular

More like this
Related

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ ಕೆಟ್ಟ ಕನಸುಗಳು...

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ ಸಿದ್ದರಾಮಯ್ಯ

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ...

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಬೆಂಗಳೂರು: ಐತಿಹಾಸಿಕ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಇಂದು...

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ!

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ! ಬೆಂಗಳೂರು: ಸಿಮೆಂಟ್ ಮಿಕ್ಸರ್...