ಬೀದಿ ನಾಯಿಗಳಿಗೆ ಊಟ ಹಾಕಿದ ಮಹಿಳೆಗೆ ಖಾಸಗಿ ಅಂಗ ತೋರಿಸ ಪೊಲೀಸಪ್ಪ

Date:

ಬೀದಿ ನಾಯಿಗಳಿಗೆ ಊಟ ಹಾಕಲು ಬಂದ ಮಹಿಳೆಯೊಬ್ಬರಿಗೆ ಪೊಲೀಸ್​ ಕಾನ್ಸ್​ಟೇಬಲ್​ ಒಬ್ಬ ತನ್ನ ಮರ್ಮಾಂಗ ತೋರಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ಸೋಮವಾರ ರಾತ್ರಿ ಯಲಹಂಕದ ನ್ಯೂಟೌನ್​ನ ಹೌಸಿಂಗ್​ ಬೋರ್ಡ್​ ಬಳಿ ನಡೆದಿದೆ.

ಅಮೃತಹಳ್ಳಿ ಠಾಣೆಯ ಹೆಡ್​​ಕಾನ್​ಸ್ಟೇಬಲ್ ಚಂದ್ರಶೇಖರ್ ಗಂಭೀರ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಈಶಾನ್ಯ ವಿಭಾಗದ ಡಿಸಿಪಿ ಸಿ. ಕೆ. ಬಾಬಾ ಅವರು ಆರೋಪಿ ಹೆಡ್​ಕಾನ್ಸ್​​ಟೇಬಲ್​ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಸೋಮವಾರ ರಾತ್ರಿ ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಚಂದ್ರಶೇಖರ್​ ಮೂತ್ರ ವಿಸರ್ಜನೆಗೆಂದು ಬೈಕ್​ ನಿಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳೆಯೊಬ್ಬರು ಬೀದಿ ನಾಯಿಗಳಿಗೆ ಊಟ ಕೊಡಲೆಂದು ಹೊರಗೆ ಬಂದಿದ್ದಾರೆ. ಈ ವೇಳೆ ಮಹಿಳೆಯನ್ನು ನೋಡಿದ ಆರೋಪಿ ಕಾನ್ಸ್​ಟೇಬಲ್ ಆಕೆಗೆ​ ಮರ್ಮಾಂಗವನ್ನು ತೋರಿಸಿ, ಅಸಹ್ಯವಾಗಿ ವರ್ತಿಸಿರುವುದಾಗಿ ಆರೋಪಿಸಲಾಗಿದೆ.

https://twitter.com/ForeverIndian07/status/1472870747706204165?t=8O-Zxd7Da38pWg7RJmcKHw&s=19

ಅನುಚಿತವಾಗಿ ವರ್ತಿಸಿದ ಕಾನ್ಸ್​ಟೇಬಲ್​ ಮತ್ತು ಮಹಿಳೆಯ ನಡುವೆ ಸ್ಥಳದಲ್ಲೇ ಮಾತಿನ ಚಕಮಕಿ ನಡೆದಿದ್ದು, ಅದನ್ನು ವಿಡಿಯೋ ಮಾಡಿಕೊಂಡಿರುವ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಬೆಂಗಳೂರು ಪೊಲೀಸ್​ ಟ್ವಿಟರ್​ ಖಾತೆಗೆ ಟ್ಯಾಗ್​ ಮಾಡಿದ್ದಾರೆ. ಸ್ಥಳೀಯರು ಬರುತ್ತಿದ್ದಂತೆ ಪಾನಮತ್ತರಾಗಿದ್ದರ ಕಾನ್ಸ್​ಟೇಬಲ್​ ಸ್ಥಳದಲ್ಲೇ ಹೈಡ್ರಾಮ ಮಾಡಿರುವುದು ವಿಡಿಯೋದಲ್ಲಿದೆ.

ಇಂದು ಪೇದೆಯಿಂದ ಹೆಣ್ಣು ಮಗಳೊಬ್ಬಳು ಕಿರುಕುಳ ಅನುಭವಿಸಿದ್ದಾಳೆ. ಇದನ್ನು ತಡೆಯದಿದ್ದರೆ, ನಾಳೆ ನಿಮ್ಮ ಹೆಣ್ಣು ಮಕ್ಕಳಿಗೂ ಈ ರೀತಿ ಆಗಬಹುದು. ನಾವು ಇದನ್ನು ಬೆಂಗಳೂರು ಪೊಲೀಸರಿಗೆ ತಿಳಿಸಬೇಕಿದೆ. ಪೊಲೀಸರು ಆರೋಪಿ ವಿರುದ್ಧ ಕಠಿಣ ಕ್ರಮವನ್ನು ಖಚಿತಪಡಿಸಬೇಕಿದೆ ಎಂದು ಟ್ವೀಟ್​ ಮೂಲಕ ಮನವಿ ಮಾಡಲಾಗಿತ್ತು. ಅಲ್ಲದೆ, ಸಹೋದ್ಯೋಗಿಗಳನ್ನು ಕರೆತಂದು ನರೆಯವರಿಗೆ ಬೆದರಿಕೆ ಹಾಕಿರುವ ಆರೋಪವಿದ್ದು, ಸಿಸಿಟಿವಿ ದೃಶ್ಯವನ್ನು ನೀಡಲು ನೆರೆಯವರು ಹೆದರುತ್ತಿದ್ದಾರೆ ಎಂದು ಟ್ವೀಟ್​ನಲ್ಲಿ ತಿಳಿಸಲಾಗಿದೆ.

Share post:

Subscribe

spot_imgspot_img

Popular

More like this
Related

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ: ಡಿ.ಕೆ. ಶಿವಕುಮಾರ್

ನಮ್ಮ ಹೋರಾಟಕ್ಕೆ ಗಾಬರಿಗೊಂಡು ದೆಹಲಿಗೆ ವಾಹನ ಪ್ರವೇಶ ತಡೆಯುತ್ತಿರುವ ಬಿಜೆಪಿ ಸರ್ಕಾರ:...

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಹ್ಯಾಂಡಸಮ್ ಟೀಚರ್ ಅಂಡ್...

ರಾಜ್ಯದಲ್ಲಿ ಮೈಕೊರೆಯುವ ಚಳಿ ಹೆಚ್ಚಳ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಮೈಕೊರೆಯುವ ಚಳಿ ಹೆಚ್ಚಳ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಬೆಂಗಳೂರು: ಬೆಂಗಳೂರು...

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ: ವಿಜಯೇಂದ್ರ

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ:...