‘ಬುರುಡೆ’ ಪ್ರಕರಣ: ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಜಾಮೀನು ಸಿಕ್ಕಿದ್ರು ಬಿಡುಗಡೆ ಭಾಗ್ಯವಿಲ್ಲ
ಶಿವಮೊಗ್ಗ: ಧರ್ಮಸ್ಥಳ ‘ಬುರುಡೆ’ ಪ್ರಕರಣದ ಆರೋಪಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ನ್ಯಾಯಾಲಯವು ನವೆಂಬರ್ 26 ರಂದು ಜಾಮೀನು ಮಂಜೂರು ಮಾಡಿತ್ತು. ಇಬ್ಬರು ಜಾಮೀನುದಾರರು ಮತ್ತು 1 ಲಕ್ಷ ರೂ. ಭದ್ರತೆ ಬಾಂಡ್ ಪೂರೈಸುವಂತೆ ಕೋರ್ಟ್ ಆದೇಶಿಸಿತ್ತು.
ಆದರೆ, ಯಾರು ಜಾಮೀನು ಮತ್ತು ಭದ್ರತೆ ಹಣ ಠೇವಣಿ ಮಾಡದ ಹಿನ್ನೆಲೆಯಲ್ಲಿ ಚಿನ್ನಯ್ಯ ಇನ್ನೂ ಶಿವಮೊಗ್ಗ ಜಿಲ್ಲಾ ಕಾರಾಗೃಹದಲ್ಲಿಯೇ ಬಂಧಿತನಾಗಿದ್ದಾರೆ. ಚಿನ್ನಯ್ಯ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ ಸ್ಥಳಗಳಲ್ಲಿ ನಡೆಸಿದ ಪರಿಶೀಲನೆಗಳಲ್ಲಿ ಯಾವುದೇ ಮಹತ್ವದ ಸುಳಿವು ಅಥವಾ ಆರೋಪಕ್ಕೆ ಪೂರಕವಾದ ಅಂಶಗಳು ಪತ್ತೆಯಾಗಿಲ್ಲ. ಈ ಕಾರಣದಿಂದಲೇ ಆತನೇ ಪ್ರಕರಣದಲ್ಲಿ ಆರೋಪಿ ಆಗಿದ್ದಾನೆ.






