ಕಾಲೇಜುಗಳಲ್ಲಿ ಉತ್ತಮ ಡ್ರೆಸ್ ಧರಿಸುವುದರ ಕುರಿತಾಗಿ ಆಗಿದ್ದಾಕೆ ವಾದ ವಿವಾದಗಳು ನಡೆಯುವುದು ಕಾಮನ್. ಪಾಶ್ಚಿಮಾತ್ಯ ಉಡುಗೆಗಳು ಮತ್ತು ತುಂಡುಡುಗೆ ಗಳನ್ನು ತೊಟ್ಟು ಕಾಲೇಜಿಗೆ ಬರುವಂತಿಲ್ಲ ಎಂದು ಹಲವಾರು ಕಾಲೇಜು ಮಂಡಳಿಗಳು ತೀರ್ಮಾನವನ್ನು ತೆಗೆದುಕೊಂಡಿವೆ. ಅದೇ ರೀತಿ ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿರುವ SRK ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಕಾಲೇಜಿಗೆ ಬರುವಂತಿಲ್ಲ ಎಂದು ರೂಲ್ಸ್ ಮಾಡಿದೆ.
ಹೌದು ಕಾಲೇಜಿಗೆ ಬುರ್ಖಾ ಧರಿಸಿ ಬರುತ್ತಿದ್ದ ಮುಸಲ್ಮಾನ್ ಯುವತಿಯರನ್ನು ತಡೆದ ಪ್ರಿನ್ಸಿಪಾಲರು ಬೆತ್ತ ಹಿಡಿದು ವಾರ್ನ್ ಮಾಡಿದ್ದಾರೆ. ಬುರ್ಖಾ ಧರಿಸಿ ಕಾಲೇಜಿನ ಆವರಣಕ್ಕೆ ಬರುವಂತಿಲ್ಲ ಬಸ್ಸ್ಟ್ಯಾಂಡ್ ನಲ್ಲಿಯೇ ನಿಮ್ಮ ಬುರ್ಖಾ ಕಳಚಿ ತದನಂತರ ಕಾಲೇಜಿಗೆ ಪ್ರವೇಶಿಸಿ ಎಂದು ವಾರ್ನಿಂಗ್ ನೀಡಿದ್ದಾರೆ. ಇನ್ನು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ವಾದ ವಿವಾದಗಳು ತಾರಕಕ್ಕೇರಿವೆ. ಇನ್ನು ಮುಸ್ಲಿಂ ಜನ ಈ ವಿಷಯದ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.