ಬುರ್ಖಾ ಧರಿಸಿ ಲೇಡಿಸ್ ಹಾಸ್ಟೆಲ್‌ʼಗೆ ನುಗ್ಗಿದ ಯುವಕ!

Date:

ಬುರ್ಖಾ ಧರಿಸಿ ಲೇಡಿಸ್ ಹಾಸ್ಟೆಲ್‌ʼಗೆ ನುಗ್ಗಿದ ಯುವಕ!

ಬೆಂಗಳೂರು: ಪೋಲಿ ಹುಡುಗರು ರಸ್ತೆಯಲ್ಲಿ ಸುಮ್ಮನೇ ಹೋಗುವ ಜನರಿಗೆ ತೊಂದರೆ ಕೊಡ್ತಿರ್ತಾರೆ. ಆದರೆ ಇಲ್ಲೋರ್ವ ಪೋಲಿ ಯುವಕ ಒಂದ್ ಹೆಜ್ಜೆ ಮುಂದೆ ಹೋಗಿದ್ದಾನೆ. ಅದೇನೆಂದರೆ ಯುವಕ ಸ್ನೇಹಿತೆಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಹುಡುಗಿಯರ ಹಾಸ್ಟೆಲ್‌ಗೆ ನುಗ್ಗಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಕಾಲೇಜು ಆವರಣದಲ್ಲಿ ನಡೆದಿದೆ.
ಜ್ಞಾನಭಾರತಿ ಕಾಲೇಜಿನ ರಮಾಬಾಯಿ ಹಾಸ್ಟೆಲ್‌ಗೆ ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಯುವಕ ಬುರ್ಖಾ ಧರಿಸಿ ಪ್ರವೇಶಿಸಿದ್ದ. ಬುರ್ಖಾ ಧರಿಸಿದ ಯುವಕನನ್ನ ಮಾಲೂರು ಮೂಲದವನು ಎನ್ನಲಾಗಿದೆ. ಯುವಕನ್ನು ಕಂಡ ವಿದ್ಯಾರ್ಥಿನಿಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಜ್ಞಾನಭಾರತಿ ಠಾಣೆಯ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದರು.
ವಿದ್ಯಾರ್ಥಿನಿಯರಿರುವ ಹಾಸ್ಟೆಲ್‌ಗೆ ನುಗ್ಗಿರುವ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಸ್ನೇಹಿತೆಯಿಂದಲೇ ಬಟ್ಟೆ ತೆಗೆದುಕೊಂಡು ಹಾಸ್ಟೆಲ್‌ಗೆ ನುಗ್ಗಿದ್ದ ಯುವಕನಿಗೆ ಉಳಿದುಕೊಳ್ಳಲು ಸ್ಥಳವಿಲ್ಲದ ಕಾರಣ ಆಕೆಯೇ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಮಾಡಿರುವುದು ತಿಳಿದುಬಂದಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಬೆಂಗಳೂರು: ದುಬೈನಲ್ಲಿ...

ಬೆಂಗಳೂರುನಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ

ಬೆಂಗಳೂರುದಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ ಬೆಂಗಳೂರು: ನಗರದಲ್ಲಿ ಇಂದು...

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌ ಬೆಂಗಳೂರು: ಇಸ್ರೇಲ್–ಇರಾನ್ ನಡುವಿನ...

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್ ನಡೆಯಲಿದೆ. ಇದರ...