ಬೆಂಗಳೂರು: ಬೆಂಗಳೂರಲ್ಲಿ 5 ಸಾವಿರ ರೂಪಾಯಿ ಲಂಚ ಸ್ವೀಕರಿಸರುವಾಗ ಲೋಕಾಯುಕ್ತ ಬಲೆಗೆ ಲೇಬರ್ ಇನ್ಸ್‌ಪೆಕ್ಟರ್ ಬಿದ್ದಿದ್ದಾರೆ. ಶಮ್ಮಿ ಲೋಕಾ ಬಲೆಗೆ ಬಿದ್ದ ಲೇಬರ್ ಆಫೀಸರ್ ಆಗಿದ್ದು, ಖಾಸಗಿ ಕಂಪನಿಗೆ ಕೊಟ್ಟಿದ್ದ ನೋಟಿಸ್ ಕ್ಯಾನ್ಸಲ್ ಮಾಡಲು ಐದು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇನ್ನೂ ಇದರ ಸಂಬಂಧ ಭಾನುಪ್ರಕಾಶ್ ಎಂಬುವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ರು. ಬಾಗಲಗುಂಟೆಯ ಕಚೇರಿಯಲ್ಲಿ ದಾಳಿ ನಡೆಸಿ ಶಮ್ಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಈ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರಲ್ಲಿ ಲೋಕಾ ಬಲೆಗೆ ಬಿದ್ದ ಲೇಬರ್ ಇನ್ಸ್‌ಪೆಕ್ಟರ್!
Date: